HEALTH TIPS

ಭೂಮಿ ಅಂತ್ಯ ಕುರಿತು ನ್ಯೂಟನ್ ಹೇಳಿದ ಗಣಿತ ಸೂತ್ರ..! 35 ವರ್ಷ ಬಾಕಿ ಎಂದಿದೆ ಪುಸ್ತಕ!!

 ಈ ಪ್ರಪಂಚ ಅಂತ್ಯವಾಗುವುದು ಯಾವಾಗ ಎಂದು ಯಾರಾದರು ಕೇಳಿದರೆ ಹಲವು ರೀತಿಯ ಉತ್ತರಗಳು ನಮ್ಮಲ್ಲಿ ಬರುತ್ತವೆ. ಹಾಗೆ ಹತ್ತಾರು ಜ್ಯೋತಿಷಿಗಳು, ಭವಿಷ್ಯ ನುಡಿಯುವ ಮಂದಿ ಈ ಭೂಮಿ ಅಂತ್ಯ ಯಾವಾಗ ಆಗಬಹುದು ಎಂಬುದನ್ನು ಕೂಡ ಊಹಿಸಿದ್ದಾರೆ. ಹಾಗೆ ಹಲವರು ಈ ಕುರಿತ ಸಿದ್ಧಾಂತಗಳ ಮಂಡಿಸುವುದು ನೋಡಬಹುದು.'

ಆದ್ರೆ ಪ್ರಪಂಚದ ಅಂತ್ಯ ಕುರಿತಂತೆ ಭವಿಷ್ಯ ನುಡಿದಿರುವ ಒಬ್ಬನೇ ಒಬ್ಬ ವಿಜ್ಞಾನಿ ಅಂದರೆ ಅದು ಐಸಾಕ್ ನ್ಯೂಟನ್. ಐಸಾಕ್ ನ್ಯೂಟನ್ ಹೆಸರು ನೀವು ಕೇಳಿರಬಹುದು. ಭೂಮಿಯ ಗುರುತ್ವಾಕರ್ಷಣಾ ಬಲ ಕಂಡು ಹಿಡಿದ ವಿಜ್ಞಾನಿ. ನ್ಯೂಟನ್ ಗಣಿತ ನಿಯಮಗಳು, ಸೂತ್ರಗಳು ಇಂದಿಗೂ ಪ್ರಸ್ತುತ. ಆತನ ಗಣಿತ ಸೂತ್ರವಿಲ್ಲದೆ ಹಲವು ಕಷ್ಟಕರ ಸಿದ್ದಾಂತಗಳ ನೀವು ಬಿಡಿಸಲು ಆಗುವುದಿಲ್ಲ.

ಐಸಾಕ್ 1687 ರಲ್ಲಿ ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿನಲ್ಲಿ ಗಣಿತ ಪ್ರಾಧ್ಯಾಪಕರಾಗಿದ್ದಾಗ ತನ್ನ ಅತ್ಯಂತ ಪ್ರಸಿದ್ಧ ಪುಸ್ತಕ ಪ್ರಿನ್ಸಿಪಿಯಾವನ್ನು ಪ್ರಕಟಿಸಿದರು. ಇದರಲ್ಲಿ ಅವರ ಸಿದ್ಧಾಂತಗಳು ಇಂದಿಗೂ ನಾವು ಕಲಿಯುತ್ತಿದ್ದೇವೆ. ಈ ನ್ಯೂಟನ್ ಭೂಮಿ ಅಂತ್ಯದ ಕುರಿತಂತೆಯೂ ವಿವರಿಸಿದ್ದಾರೆ. ಅದು ಕೂಡ ಅವರ ಗಣಿತ ಸಿದ್ಧಾಂತದ ಮೇಲೆಯೇ ರೂಪುಗೊಂಡಿರುವ ಸಿದ್ದಾಂತವಾಗಿದೆ.


ಅವರ ಸಿದ್ಧಾಂತವು ಭೂಮಿ ಯಾವಾಗ ಅಂತ್ಯವಾಗುತ್ತೆ ಅನ್ನೋದನ್ನು ಕೂಡ ವಿವರಿಸಿದೆ. 300 ವರ್ಷಗಳ ಹಿಂದೆ ನ್ಯೂಟನ್ ತನ್ನ ಗಣಿತ ಲೆಕ್ಕಾಚಾರದ ಆಧಾರದ ಮೇಲೆ ಈ ಪ್ರಪಂಚದ ಅಂತ್ಯ ಕುರಿತು ವಿವರಿಸಿದ್ದಾನೆ. ಬೈಬಲ್‌ನಲ್ಲಿ ವಿವರಿಸಲಾಗಿರುವ ಅಪೋಕ್ಯಾಲಿಪ್ಸ್ ಪರಿಕಲ್ಪನೆಯನ್ನು ಆಧರಿಸಿ ಈ ಗಣಿತ ಸೂತ್ರವನ್ನು ಆತ ವಿವರಿಸಿದ್ದಾನೆ.

ಬೈಬಲ್‌ನಲ್ಲಿ ಅಪೋಕ್ಯಾಲಿಪ್ಸ್ ಎಂದರೆ ಅಲ್ಲಿ ಭೂಮಿ ಅಂತ್ಯದ ಬಗ್ಗೆ ಹೇಳಲಾಗಿದೆ. ಅದರಲ್ಲೂ ಬೆಂಕಿ ಉಂಡೆಗಳು ಭೂಮಿಗೆ ಉರುಳುತ್ತವೆ ಎಂದು ಹೇಳಲಾಗಿದೆ. ಇದೇ ಆಧಾರದಲ್ಲಿ ನ್ಯೂಟನ್ ಕೂಡ ತನ್ನ ಸೂತ್ರ ಹಣೆದಿದ್ದಾನೆ. ಆತನ ತನ್ನ ರೆವೆಲೇಶನ್ ಪುಸ್ತಕದ ಕೊನೆಯ ಅಧ್ಯಾಯದಲ್ಲಿ ಯುದ್ಧದ ಕುರಿತಂತೆ ವಿವರಿಸುತ್ತಾನೆ. ದೇವರು ಮತ್ತು ಯುದ್ಧ ಎಂದು ಹೇಳಿರುವ ಆತ ದೇವರು ಮತ್ತು ದುಷ್ಟಶಕ್ತಿಯ ನಡುವಿನ ಘೋರ ಯುದ್ಧ ಎಂದಿದ್ದಾನೆ.

ಇದು ಭೂಮಿಯ ಅಂತ್ಯ ಎಂದು ಅಲ್ಲಿಂದ ಶಾಂತಿಯ ಯುವಕ್ಕೆ ನಾಂದಿಯಾಗುತ್ತದೆ ಎಂದು ವಿವರಿಸಲಾಗಿದೆ. ಇದಕ್ಕೊಂದು ಗಣಿತ ಸೂತ್ರವೂ ಇದೆ. ನ್ಯೂಟನ್ ಈ ಸಮಯವನ್ನು ಲೆಕ್ಕಹಾಕಲು ಗಣಿತ ಮತ್ತು ದಿನಾಂಕಗಳ ಗುರುತಿಸಿದ್ದಾನೆ. ಪುಸ್ತಕದಲ್ಲಿ ವಿವರಿಸಿದಂತೆ 1,260 ವರ್ಷಗಳ ಕಾಲ ವ್ಯಾಪ್ತಿಯಲ್ಲಿ ಚರ್ಚ್‌ಗಳ ಅಂತ್ಯ ಮತ್ತು ಧರ್ಮದ ಉದಯದ ನಡುವಿನ ಸಮಯವನ್ನು ಇದು ಪ್ರತಿನಿಧಿಸುತ್ತದೆ. ಈ ವರ್ಷವನ್ನು ಆತ ಒಂದು ದಿನವನ್ನು ಒಂದು ವರ್ಷ ಎಂದು ಪರಿಗಣನೆಗೆ ತೆಗೆದುಕೊಂಡಿದ್ದ.

ಹೀಗಾಗಿ ನ್ಯೂಟನ್ ನಿಖರವಾದ ದಿನಾಂಕ ಪತ್ತೆ ಮಾಡಲು ಐತಿಹಾಸಿಕ ದಾಖಲೆಗಳನ್ನು ಆತ ಅಧ್ಯಯನ ಮಾಡಿದ. ಹೀಗಾಗಿ ಚರ್ಚ್‌ನ ಅಂತ್ಯವು 800 AD ಎಂದು ಆತ ನಿರ್ಧರಿಸಿದ. ಇದು ರೋಮನ್ ಸಾಮ್ರಾಜ್ಯದ ಸ್ಥಾಪನೆಯ ಸಮಯಕ್ಕೆ ಹೊಂದಿಕೆಯಾಗುತ್ತಿತ್ತು. ಅನಂತರ ಇದೇ ದಿನಾಂಕಕ್ಕೆ 1,260 ವರ್ಷಗಳ ಸೇರಿಸಿದ. ಈ ದಿನಾಂಕ 2060ಕ್ಕೆ ಅಂತ್ಯವಾಯಿತು.

ಅಂದರೆ ನ್ಯೂಟನ್ ಗಣಿತ ನಿಯಮದ ಪ್ರಕಾರ ಈ ಪ್ರಪಂಚವು 2060 ಅಂತ್ಯವಾಗುತ್ತದೆ. ಆತ ಬರೆದಿರುವ ಪುಸ್ತಕದಲ್ಲೂ ಇದೇ ನಿಯಮವಿದ್ದು, ಇದೇ ದಿನಾಂಕ ಉಲ್ಲೇಖಗೊಂಡಿದೆ. ಆದರೆ ಹಲವರು ಈ ದಿನಾಂಕ ಹಾಗೂ ಆತನ ಗಣಿತದ ಲೆಕ್ಕವನ್ನು ಅರ್ಥ ಮಾಡಿಕೊಳ್ಳಲಾಗದೆ ಪರಿತಪಿಸುತ್ತಾರೆ. ಒಂದು ದಿನವನ್ನು ಆತ ಒಂದು ವರ್ಷ ಎಂದು ಲೆಕ್ಕ ಹಾಕಿರುವುದು ಸರಿಯಾದ ವಿಧಾನವಲ್ಲ ಎಂಬ ಚರ್ಚೆಯೂ ಇದೆ.



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries