ತಿರುವನಂತಪುರಂ: ರಾಜ್ಯ ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಬಂಪರ್ ಲಾಟರಿ ಡ್ರಾದಲ್ಲಿ ಎಕ್ಸ್ ಡಿ 387132 ಸಂಖ್ಯೆಗೆ 20 ಕೋಟಿ ರೂಪಾಯಿಗಳ ಮೊದಲ ಬಹುಮಾನ ಲಭಿಒಸಿದೆ.
ಮಧ್ಯಾಹ್ನ 2 ಗಂಟೆಗೆ ಗೋರ್ಗಿ ಭವನದಲ್ಲಿ ಹಣಕಾಸು ಸಚಿವ ಕೆ. ಎನ್ ಬಾಲಗೋಪಾಲ್ ಡ್ರಾ ನಿರ್ವಹಿಸಿದರು. ಕಣ್ಣೂರಿನ ಅನೀಶ್ ಎಂ. ಜಿ ಎಂಬ ಏಜೆಂಟ್ ಮಾರಾಟ ಮಾಡಿದ ಟಿಕೆಟ್ ಮೊದಲ ಬಹುಮಾನ ಗೆದದುಕೊಂಡಿದೆ.
20 ಕೋಟಿ ರೂಪಾಯಿಗಳ ಪ್ರಥಮ ಬಹುಮಾನವನ್ನು ನೀಡುವ ಬಂಪರ್ ಡ್ರಾದಲ್ಲಿ 21 ಜನರು ಕೋಟ್ಯಾಧಿಪತಿಗಳಾದರು. 20 ಜನರು ತಲಾ 1 ಕೋಟಿ ರೂ.ಗಳ ಎರಡನೇ ಬಹುಮಾನವನ್ನು ಪಡೆದರು. ಮೂರನೇ ಬಹುಮಾನ 30 ಜನರಿಗೆ ತಲಾ 10 ಲಕ್ಷ ರೂ. ಮತ್ತು ನಾಲ್ಕನೇ ಬಹುಮಾನ 20 ಜನರಿಗೆ ತಲಾ 3 ಲಕ್ಷ ರೂ. ನೀಡಲಾಗುವುದು. ಸೋಮವಾರ ಮಧ್ಯಾಹ್ನದ ಹೊತ್ತಿಗೆ, ಮುದ್ರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾದ 400 ರೂ. ಬೆಲೆಯ 5 ಮಿಲಿಯನ್ ಟಿಕೆಟ್‍ಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ಮಾರಾಟವಾಗಿವೆ.
ಪಾಲಕ್ಕಾಡ್ ಜಿಲ್ಲೆಯಲ್ಲಿ ಅತಿ ಹೆಚ್ಚು ಟಿಕೆಟ್‍ಗಳು ಮಾರಾಟವಾಗಿವೆ. ಎರಡನೇ ಸ್ಥಾನ ತಿರುವನಂತಪುರಕ್ಕೆ ಲಭಿಸಿದೆ. ಕ್ರಿಸ್‍ಮಸ್ ಮತ್ತು ಹೊಸ ವರ್ಷದ ಬಂಪರ್ ಮಾರಾಟವು ಡ್ರಾದ ಕೊನೆಯ ಗಂಟೆಗಳಲ್ಲಿಯೂ ಮಾರಾಟ ಬಿರುಸಾಗಿತ್ತು.