ಮಾಲಿ: ಪೂರ್ವ ಮಾಲಿಯಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 42 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕೆನಿಬಾ ಜಿಲ್ಲೆಯ ಬಿಲಾಲಿ ಕೊಟೊ ಗಣಿಯಲ್ಲಿ ಅವಘಡ ಸಂಭವಿಸಿದೆ. ಈ ಸಂಬಂಧ ಮಾಲಿಯ ಟೆಲಿವಿಷನ್‌ಗಳಲ್ಲಿ ವರದಿಯಾಗಿದೆ.
ಪಶ್ಚಿಮ ಆಫ್ರಿಕಾದ ದೇಶದಲ್ಲಿ ಈ ವರ್ಷ ಸಂಭವಿಸಿದ ಎರಡನೇ ದೊಡ್ಡ ದುರಂತ ಇದಾಗಿದೆ.
ಆಫ್ರಿಕಾದ ಅಗ್ರ ಮೂರು ಚಿನ್ನ ಉತ್ಪಾದನೆ ದೇಶಗಳಲ್ಲಿ ಮಾಲಿ ಒಂದಾಗಿದೆ.
ಜನವರಿ 29ರಂದು ಸಂಭವಿಸಿದ್ದ ಅಪಘಾತದಲ್ಲಿ ಮಹಿಳೆಯರು ಸೇರಿದಂತೆ ಹಲವರು ಮೃತಪಟ್ಟಿದ್ದರು.
ಕಳೆದ ವರ್ಷ ರಾಜಧಾನಿ ಬಮಾಕೊದ ಸಮೀಪದಲ್ಲಿ ಸಂಭವಿಸಿದ್ದ ಚಿನ್ನದ ಗಣಿ ದುರಂತದಲ್ಲಿ 70ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.