HEALTH TIPS

ಭಾರತದಲ್ಲಿ ಶೇ.50 ಕ್ಕೂ ಹೆಚ್ಚು ಜನರಿಗೆ ಸರ್ಪಸುತ್ತಿನ ಬಗ್ಗೆ ಮಾಹಿತಿಯೇ ಇಲ್ಲ; ಸಮೀಕ್ಷೆಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

Top Post Ad

Click to join Samarasasudhi Official Whatsapp Group

Qries

50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸರ್ಪಸುತ್ತು ಬರುವುದು ಸಾಮಾನ್ಯವಾಗಿದೆ. ಆದರೆ, ಇತ್ತೀಚಿನ ಜಾಗತಿಕ ಸಮೀಕ್ಷೆ ಪ್ರಕಾರ ಭಾರತದಲ್ಲಿ ಈ ವಯೋಮಾನದವರಲ್ಲಿ ಶೇ.56.6 ರಷ್ಟು ಜನರಿಗೆ ಸರ್ಪಸುತ್ತಿನ ಬಗ್ಗೆ ಸ್ವಲ್ಪ ಮಟ್ಟಿನ ಮಾಹಿತಿ ಇಲ್ಲವಾಗಿದೆ.

50 ವರ್ಷಕ್ಕಿಂತ ಮೇಲಿನವರಲ್ಲಿ ಶೇ.90 ರಷ್ಟಕ್ಕಿಂತ ಹೆಚ್ಚು ಜನರಲ್ಲಿ ಈ ಸರ್ಪಸುತ್ತಿನ ವೈರಸ್ ಇದೆ ಮತ್ತು ಇದರಿಂದ ಅವರು ದುರ್ಬಲರಾಗುತ್ತಿದ್ದಾರೆ.

ಈ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಪ್ರತಿಕ್ರಿಯೆ ನೀಡಿದವರಲ್ಲಿ ಕೇವಲ ಶೇ.44 ರಷ್ಟು ಮಂದಿ ಸರ್ಪಸುತ್ತಿನ ಬಗ್ಗೆ ತಮಗೆ ಅರಿವಿದೆ ಎಂದು ಹೇಳಿಕೊಂಡಿದ್ದಾರೆ.

ಫೆಬ್ರವರಿ 24 ರಿಂದ ಮಾರ್ಚ್ 2, 2025 ರಲ್ಲಿ ಸರ್ಪಸುತ್ತಿನ ಜಾಗೃತಿ ಸಪ್ತಾಹ ಆರಂಭಿಸಲಾಗಿದ್ದು, ಸಮೀಕ್ಷೆಯ ಸಂಶೋಧನೆಗಳು ವಿಶೇಷವಾಗಿ ಮೊದಲೇ ಅಸ್ತಿತ್ವದಲ್ಲಿರುವ ಆರೋಗ್ಯ ಪರಿಸ್ಥಿತಿಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಅಪಾಯಗಳ ಬಗ್ಗೆ ಸೀಮಿತ ಅರಿವು ಇದೆ ಎಂಬುದನ್ನು ದೃಢಪಡಿಸಿದೆ.

ಭಾರತದಲ್ಲಿ ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.61 ರಷ್ಟು ಮಂದಿ ಮಧುಮೇಹ, ಸಿಒಪಿಡಿ, ಅಸ್ತಮಾ, ಹೃದಯರಕ್ತನಾಳದ ಕಾಯಿಲೆ ಅಥವಾ ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಂತಹ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಆದಾಗ್ಯೂ, ಇದರಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಶೇ.49 ರಷ್ಟು ಜನರು ಈ ಸರ್ಪಸುತ್ತು ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇ.54 ರಷ್ಟು ಜನರು ದೀರ್ಘಾವಧಿ ಪರಿಸ್ಥಿತಿಗಳನ್ನು ಹೊಂದಿದ್ದರು. ಆದರೆ, ಕೇವಲ ಶೇ.13 ರಷ್ಟು ಜನರು ಮಾತ್ರ ಸರ್ಪಸುತ್ತು ಬಗ್ಗೆ ಗಮನಾರ್ಹವಾದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.

ಜಿಎಸ್ ಕೆ ಇಂಡಿಯಾದ ವೈದ್ಯಕೀಯ ನಿರ್ದೇಶಕರಾದ ಡಾ. ಶಾಲಿನಿ ಮೆನನ್ ಅವರು ಮಾತನಾಡಿ , ʼವಯಸ್ಸಾದಂತೆ, ರೋಗದ ವಿರುದ್ಧ ಹೋರಾಟ ಮಾಡುವ ನಮ್ಮ ನೈಸರ್ಗಿಕ ಸಾಮರ್ಥ್ಯವು ಕಡಿಮೆಯಾಗುತ್ತದೆ. ಇದು ಸರ್ಪಸುತ್ತು ಮುಂತಾದ ವಿವಿಧ ರೋಗಗಳಿಗೆ ನಮ್ಮನ್ನು ಹೆಚ್ಚು ಒಳಗಾಗುವಂತೆ ಮಾಡುತ್ತದೆ, ವಯಸ್ಸಾಗುವುದನ್ನು ದೀರ್ಘಕಾಲದ ಪರಿಸ್ಥಿತಿಗಳೊಂದಿಗೆ ಸೇರಿಸಿದಾಗ ಈ ಅಪಾಯವು ಹೆಚ್ಚಾಗುವುದನ್ನು ಕಾಣಬಹುದಾಗಿದೆʼ ಎಂದಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries