ಕಾಸರಗೋಡು: ಐಡಿಬಿಐ ಬ್ಯಾಂಕಿನ 60ನೇ ವಾರ್ಷಿಕೋತ್ಸವ ಅಂಗವಾಗಿ ಬ್ಯಾಂಕಿನ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ 1.25 ಲಕ್ಷ ರೂ.ಮೌಲ್ಯದ ಲ್ಯಾಪ್ ಟಾಪ್ ಚೆರ್ಕಳ ಸೆಂಟ್ರಲ್ ಜಿಎಚ್ ಎಸ್ ಎಸ್ ಶಾಲೆಗೆ ಹಸ್ತಾಂತರಿಸಲಾಯಿತು.
ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಐಡಿಬಿಐ ಬ್ಯಾಂಕ್‍ನ ಕಾಸರಗೋಡು ಶಾಖಾ ಪ್ರಬಂಧಕ ಸುನಿಲ್ ಕುಮಾರ್ ಟಿ.ಕಾಞಂಗಾಡ್ ಶಾಖಾ ಪ್ರಬಂಧಕ ಸುಸ್ಮಿತ್ ಸಿ.ಪಿ ಲ್ಯಾಪ್ ಟಾಪ್ ಗಳನ್ನು ಶಾಲೆಯ ಪ್ರಾಂಶುಪಾಲ ಟಿ.ವಿ.ವಿನೋದ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಾರ್ಡ್ ಸದಸ್ಯ ಹಸೈನಾರ್ ಬದರಿಯಾ, ಮುಖ್ಯೋಪಾಧ್ಯಾಯ ಮುಹಮ್ಮದ್ ಅಲಿ ಟಿ.ಕೆ., ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಹನೀಫ ಕಣಿಯಡ್ಕ, ರಘುನಾಥ್, ಸಮೀರ್ ತೆಕ್ಕಿಲ್, ರಾಜೇಶ್ ಪಾಡಿ, ನಾಸರ್ ಧನ್ಯವಾದ್, ಅಬ್ದುಲ್ ಖಾದರ್ ಎಂ.ಎಂ ಮತ್ತು ರೋಜಿನ್ ಜೋಸೆಫ್ ಉಪಸ್ಥಿತರಿದ್ದರು.