ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನ ಬಳಿ ಇಂದು (ಶುಕ್ರವಾರ) ಮುಂಜಾನೆ 2.51ರ ಸುಮಾರಿಗೆ ಭೂಕಂಪ ತೀವ್ರತೆಯ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಸಂಶೋಧನಾ ಕೇಂದ್ರ (ಎನ್‌ಎಸ್‌ಆರ್‌ಸಿ) ತಿಳಿಸಿದೆ.
ಭೂಮಿ ಕಂಪಿಸಿದ ಪರಿಣಾಮ ಕಠ್ಮಂಡುವಿ ಬಳಿ ಕಟ್ಟಡಗಳು ನಡುಗಿದವು. ಇದರಿಂದ ಭಯಗೊಂಡ ಜನರು ಮನೆಯಿಂದ ಹೊರಬಂದಿದ್ದಾರೆ. ಆಸ್ತಿ ಅಥವಾ ಜೀವ ಹಾನಿ ಸಂಭವಿಸಿದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.
ಭೂಕಂಪದ ಕೇಂದ್ರಬಿಂದುವು ನೇಪಾಳದ ಕಠ್ಮಂಡುವಿನಿಂದ ಪೂರ್ವಕ್ಕೆ 65 ಕಿ.ಮೀ ದೂರದಲ್ಲಿದೆ ಎಂದು ಎನ್‌ಎಸ್‌ಆರ್‌ಸಿ ಹೇಳಿದೆ.
ಕಠ್ಮಂಡು ಕಣಿವೆ ಮತ್ತು ಸುತ್ತಮುತ್ತಲೂ ಭೂಕಂಪನದ ಅನುಭವವಾಗಿದೆ.