ಕಾಸರಗೋಡು: ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಮಂದಿರದಲ್ಲಿ ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ವತಿಯಿಂದ ಶ್ರೀ ವಿಶ್ವಕರ್ಮ ಭಜನಾ ಸಂಘದ 68ನೇ ಭಜನಾ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಬೆಳಿಗ್ಗೆ ಗಣಹೋಮದೊಂದಿಗೆ ಪ್ರಾರಂಭವಾಗಿ ಬಳಿಕ ಸಂಘದ ಅಧ್ಯಕ್ಷ ಭುವನೇಶ ಆಚಾರ್ಯ ತಾಳಿಪಡ್ಪು ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಜೆ 6.30 ಕ್ಕೆ ತಂತ್ರಿವರ್ಯ ಮಾಯಿಪ್ಪಾಡಿ ಬ್ರಹ್ಮಶ್ರೀ ಮಾಧವ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಪುರೋಹಿತ ಪರಕ್ಕಿಲ ಧಮೇರ್ಂದ್ರ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಮಾಯಿಪ್ಪಾಡಿ ಕೇಶವ ಆಚಾರ್ಯ ಇವರ ದಿವ್ಯ ಹಸ್ತದಿಂದ ದೀಪಪ್ರಜ್ವಲನೆಗೊಳಿಸಿ ಸಂಘದ ಹಿರಿಯರಾದ ಕಲ್ಮಾಡಿ ಸದಾಶಿವ ಆಚಾರ್ಯ ಇವರು ಭಜನೆ ಸಂಕೀರ್ತನೆಗೆ ಚಾಲನೆ ನೀಡಿದರು. ಬಳಿಕ ಊರ ಪರಊರ ವಿವಿಧ ಭಜನಾ ತಂಡಗಳು ಭಜನೆ ಸಂಕೀರ್ತನೆ ನಡೆಯಿತು. ಕಾಸರಗೋಡು ಮಲ್ಲಿಕಾರ್ಜುನ ದೇವಸ್ಥಾನದಿಂದ ಹುಲ್ಪೆ ಮೆರವಣಿಗೆಯಲ್ಲಿ ಮಕ್ಕಳ ಕುಣಿತ ಭಜನೆ ಮತಾ ಭಗಿನಿಯರು ದೀಪ, ಮುತ್ತುಕೊಡೆ, ಫಲಪುಷ್ಪಗಳೊಂದಿಗೆ ಸಮವಸ್ತ್ರ ಧರಿಸಿ ಕಾರ್ಯಕರ್ತರು ಚಂಡೆ ನಾಸಿಕ್ ಬ್ಯಾಂಡ್ ಶ್ರೀ ಮಂದಿರಕ್ಕೆ ಆಗಮಿಸಿತು.
ಕುಣಿತ ಭಜನೆ ತರಬೇತಿ ನೀಡಿದ ಶ್ರೀ ವಿಶ್ವಕರ್ಮ ಮಹಿಳಾ ಸಂಘದ ಕಾರ್ಯದರ್ಶಿ ಹೇಮಲತಾ ಗಣೇಶ್ ಆಚಾರ್ಯ ಮತ್ತು ಯುವಕ ಸಂಘದ ಸದಸ್ಯ ಆಕಾಶ್ ಆಚಾರ್ಯ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಎರಡನೇ ದಿನ ಬೆಳಿಗ್ಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ವಾರ್ಷಿಕೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.