ಇಂದಿನ ತಂತ್ರಜ್ಞಾನವು ಮನುಷ್ಯದ ದೈನಂದಿನ ಜೀನವದ ಅವಿಭಾಜ್ಯ ಅಂಗವೇ ಆಗಿದೆ. ಅದರಲ್ಲೂ AI Technology (ಕೃತಕ ಬುದ್ಧಿಮತ್ತೆ) ಬಂದ ಮೇಲಂತೂ ಪ್ರತಿ ರಂಗದಲ್ಲೂ ಎಐ ಮನುಷ್ಯ ಮಾಡುವ ಕೆಲಸ ಮಾಡುತ್ತಿದೆ. ತಂತ್ರಜ್ಞಾ ಎಲ್ಲ ರಂಗದಲ್ಲಿ ವ್ಯಾಪಿಸಿದ್ದು, ಇದೀಗ ಅಡುಗೆ ಮನೆಗೂ ಬಂದಿದೆ. ಮಾರುಕಟ್ಟೆಗಳಲ್ಲಿ ರೆಡಿ ಚಪಾತಿ ಸಿಗುತ್ತಿವೆ. ರೆಡೆ ರೊಟ್ಟಿಗಳು ಸಿಗುತ್ತವೆ. ಬಹುತೇಕ ಮಂದಿ ಮನೆಯಲ್ಲಿಯೇ ಚಪಾತಿ, ರೊಟ್ಟಿ ಮಾಡುತ್ತಾರೆ. ಈ ಚಪಾತಿಗಳು ಎಷ್ಟು ದುಂಡಾಗಿ ಇವೆ ಎಂದು ಪತ್ತೆ ಮಾಡಲು ಬೆಂಗಳೂರಿನ ಟೆಕ್ಕಿಯೊಬ್ಬ AI ಟೂಲ್ ಕಂಡು ಹಿಡಿದಿದ್ದಾರೆ.
ಹೌದು, ದೈನಂದಿನ ಆಹಾರದಲ್ಲಿ ನಾವು ಬಳಸುವ ಚಪಾತಿಯು ಎಷ್ಟರ ಮಟ್ಟಿಗೆ ದುಂಡಾಗಿದೆ, ದುಂಡಾಗಿ ಕಾಣುತ್ತಿದೆ ಎಂದು ಕಂಡು ಹಿಡಿಯಲು ಐಐಟಿ ಪದವೀಧರರೊಬ್ಬರು ಎಐ ಟೂಲ್ ಆದ, rotichecker.ai ಟೂಲ್ ಅನ್ನು ಕಂಡು ಹಿಡಿದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಫೋಟೋ, ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. @animeshsingh38 ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಈ ಬೆಂಗಳೂರಿನ ಟೆಕ್ಕಿ ಸುಮ್ಮನೇ ಕೂತಾಗ ಮೋಜು, ಮಸ್ತಿಗೆಂದು ಈ ಎಐ ಟೋಲ್ ಕಂಡು ಹಿಡಿದಿದ್ದಾರೆ. ಈ ಕುರಿತು ಐಐಟಿ ಪದವೀಧರ (ಹಳೇ ವಿದ್ಯಾರ್ಥಿ) ಅನಿಮೇಶ್ ಚೌಹಾಣ್ ಅವರು ಎಐ ಉಪಕರಣ ಅಭಿವೃದ್ಧಿಪಡಿಸಿದ್ದಾರೆ. ಈ ದನ್ನು ಸ್ವತಃ ಅವರೇ ಸಾಮಾಜಿಕ ಜಾಲತಾಣ (ಎಕ್ಸ್) ದಲ್ಲಿ ಹಂಚಿಕೊಂಡಿದ್ದಾರೆ. ಈ ಸಾಧನ ಬಳಸಿ ನೀವು ಮಾಡುವ ರೊಟ್ಟಿ ಇಲ್ಲವೇ ಚಪಾಟಿ ಎಷ್ಟು ದುಂಡಾಕಾರದಲ್ಲಿದೆ ಎಂದು ಹೇಳಬಹುದು.
rotichecker.ai ಟೂಲ್ ಫೋಟೊಗಳು ಸಖತ್ ವೈರಲ್ ಆಗುತ್ತಿದೆ. ಚಪಾತಿ ಮಾಡಿದ ಬಳಿಕ ಈ ಟೋಲ್ ಸಹಾಯದಿಂದ ಪರಿಶೀಲಿಸಿದರೆ ಚಪಾತಿ, ರೊಟ್ಟಿ ಎಷ್ಟು ದುಂಡಾಕಾರದಲ್ಲಿದೆ ಎಂದು ಹೇಳುತ್ತದೆ. ಅಲ್ಲದೇ ರೇಟಿಂಗ್ ನೀಡುತ್ತಿದೆ. ಶೇಕಡಾ 100ಕ್ಕೆ ಎಷ್ಟು ಪ್ರತಿಷತ ದುಂಡಾಗಿದೆ ಎಂದು ರೇಟಿಂಗ್ ನೀಡುವಂತೆ ಅಭಿವೃದ್ಧಿಪಡಿಲಾಗಿದೆ. ಸದ್ಯ ಅಡುಗೆ ಮನೆಗೆ ಬಂದ ಎಐ ಟೂಲ್ ಎಂಬ ಹೆಸರಿನಲ್ಲಿ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.
ಜನವರಿ 31ರಂದು ಈ rotichecker.ai ಟೂಲ್ ಬಗ್ಗೆ ಪೋಸ್ಟ್ ಅನ್ನು ಅನಿಮೇಶ್ ಚೌಹಾಣ್ ಅವರು ಹಂಚಿಕೊಂಡಿದ್ದಾರೆ. ಒಟ್ಟು 4.6 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. 398 ಬಾರಿ ರೀಪೋಸ್ಟ್ ಆದರೆ, 648 ಮಂದಿಯಿಂದ ಬುಕ್ ಮಾರ್ಕ್ ಆಗಿದೆ. ಅನೇಕರು ಅನೇಕ ಬಗೆಯಲ್ಲಿ ಕಾಮೆಂಟ್ ಮಾಡಿದ್ದಾರೆ.