HEALTH TIPS

Appleಗೆ ಟ್ರಂಪ್ ತಾಕೀತು: ವೈವಿದ್ಯತೆಯ ನೀತಿ ಕೈಬಿಡಲು iphone ತಯಾರಕರಿಗೆ ಸಲಹೆ

ವಾಷಿಂಗ್ಟನ್‌: 'ವೈವಿದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ತನ್ನ ನೀತಿಗಳನ್ನು ಐಫೋನ್ ತಯಾರಿಕಾ ಕಂಪನಿ ಆಯಪಲ್‌ ಕೈಬಿಡಬೇಕು' ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆಯಪಲ್ ವಿರುದ್ಧದ ಅಭಿಯಾನ ನಡೆಸುತ್ತಿರುವ ಸಂಪ್ರದಾಯವಾದಿಗಳ ಗುಂಪುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಯಪಲ್‌ ಕಂಪನಿಯ ಷೇರುದಾರರು ಮತ ಚಲಾಯಿಸಿದ್ದರು.

ಈ ಸಂದರ್ಭದಲ್ಲಿ ಟ್ರಂಪ್ ಅವರು ಕಂಪನಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ದೇಶದ ಪ್ರಮುಖ ಕಂಪನಿಗಳಾದ ಮೆಟಾ ಮತ್ತು ಆಲ್ಪಬೆಟ್ ಕಂಪನಿಗಳು ತಾವು ಅಳವಡಿಸಿಕೊಂಡಿದ್ದ ವೈವಿದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನೀತಿಗಳನ್ನು ಕೈಬಿಟ್ಟಿವೆ.

ಕಂಪನಿಗಳು ಹೊಂದಿದ್ದ ವೈವಿದ್ಯತೆಯ ನೀತಿಗಳನ್ನು ಟೀಕಿಸಿದ್ದ ಟ್ರಂಪ್, ಇವುಗಳ ವಿರುದ್ಧ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

'ವೈವೀದ್ಯತೆ, ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ನೀತಿಗಳು ಈಗ ಅಪ್ರಸ್ತುತ. ಇಂಥ ನೀತಿಗಳು ಹುಸಿ ಹಾಗೂ ನಮ್ಮ ದೇಶಕ್ಕೆ ಮಾರಕ. ಇಂಥ ನೀತಿಗಳಿಗೆ ಹೊಂದಿಕೊಳ್ಳುವ ಬದಲು, ಅವುಗಳನ್ನು ಆಯಪಲ್ ಕಂಪನಿ ಕೂಡಲೇ ಕೈಬಿಡಬೇಕು' ಎಂದು ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಬರೆದುಕೊಂಡಿದ್ದರು.

ತನ್ನ ವಾರ್ಷಿಕ ಸಭೆಯಲ್ಲಿ ಆಯಪಲ್ ಕಂಪನಿಯು ಇಂಥ ಟೀಕೆಗಳ ಕುರಿತು ತನ್ನ ಷೇರುದಾರರ ಮಾಹಿತಿ ಪಡೆಯುವ ಪ್ರಯತ್ನ ನಡೆಸಿತು. ತನ್ನ ನೀತಿಗಳನ್ನು ಹೀಗೇ ಮುಂದುವರಿಸಿದರೆ ಆಯಪಲ್ ಕಂಪನಿಗೆ ಸಾಕಷ್ಟು ವಿರೋಧ ಎದುರಾಗುವ ಸಾಧ್ಯತೆ ಹೆಚ್ಚು ಎಂದು ಷೇರುದಾರರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅಯಪಲ್, 'ಕಾನೂನಾತ್ಮಕ ಸಂಘರ್ಷಗಳನ್ನು ತಪ್ಪಿಸಲು ಅಗತ್ಯ ಸಿದ್ಧತೆಗಳನ್ನು ಕಂಪನಿ ಮಾಡಿಕೊಂಡಿದೆ' ಎಂದಿದೆ.

ಸಭೆಯ ನಂತರ ಪ್ರತಿಕ್ರಿಯಿಸಿದ ಕಂಪನಿಯ ಸಿಇಒ ಟಿಮ್ ಕುಕ್‌, 'ಜಗತ್ತಿನ ಪ್ರತಿಭಾವಂತ ತಂತ್ರಜ್ಞರನ್ನು ಆಯಪಲ್ ಕಂಪನಿ ನೇಮಿಸಿಕೊಂಡಿದೆ. ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಕಂಪನಿ ಅಳವಡಿಸಿಕೊಂಡಿದೆ. ವಿಭಿನ್ನ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು ಜತೆಗೂಡಿ ಕೆಲಸ ಮಾಡಿದಾಗ ಹೊಸ ಅನ್ವೇಷಣೆ ಸಾಧ್ಯ' ಎಂದಿದ್ದರು.

'ಕಾನೂನಿನ ನೆಲೆಗಟ್ಟಿನಲ್ಲಿ ಇಂಥ ಸಮಸ್ಯೆಗಳು ಎದುರಾದಾಗ ಕೆಲವೊಂದು ಮಾರ್ಪಾಡುಗಳನ್ನು ನಾವು ಮಾಡಿಕೊಳ್ಳಲು ಸಾಧ್ಯ. ಆದರೆ ಕಂಪನಿಯ ಘನತೆ, ಎಲ್ಲರ ಕುರಿತ ಗೌರವಭಾವ ಹಾಗೂ ನಮ್ಮ ವೃತ್ತಿಯನ್ನು ಯಾವುದೇ ಹಂತದಲ್ಲೂ ಕೈಬಿಡಲಾಗದು' ಎಂದು ಟಿಮ್ ಹೇಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries