ಇಂಫಾಲ: ಮಣಿಪುರದ ನಿಷೇಧಿತ ಸಂಘಟನೆಗಳ ಐವರು ಉಗ್ರರನ್ನು ಪೊಲೀಸರು ಇಂದು (ಶುಕ್ರವಾರ) ಬಂಧಿಸಿದ್ದಾರೆ.
ಮಣಿಪುರದ ಪಶ್ಚಿಮ ಇಂಫಾಲ, ಪೂರ್ವ ಇಂಫಾಲ ಮತ್ತು ತೌಬಲ್ ಜಿಲ್ಲೆಗಳಲ್ಲಿ ಐವರು ಉಗ್ರರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಿಷೇಧಿತ ಸಂಘಟನೆ ಕಾಂಗ್ಲೈಪಾಕ್ ಕಮ್ಯುನಿಸ್ಟ್ ಪಕ್ಷದ (ನೊಯೊನ್) ಇಬ್ಬರು ಉಗ್ರರನ್ನು ಕೆಸಿಪಿನ (ನೊಯೊನ್) ಮತ್ತೊಬ್ಬ ಉಗ್ರನನ್ನು ಬಂಧಿಸಲಾಗಿದೆ.
ಬಂಧಿತ ಉಗ್ರರು 'ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳು, ಆಸ್ಪತ್ರೆ, ಶಾಲೆ ಮತ್ತು ಪೆಟ್ರೋಲ್ ಪಂಪ್‌ಗಳಿಂದ ಸುಲಿಗೆ ಮಾಡುತ್ತಿದ್ದರು'ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ತೌಬಲ್ ಜಿಲ್ಲೆಯ ಸಂಗೈಯುಂಫಲ್‌ನಿಂದ ಕೆಸಿಪಿಯ(ಪಿಡಬ್ಲ್ಯೂಜಿ) ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಉಗ್ರರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.