ಬೆಂಗಳೂರು: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಮಗನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ವಿಷ್ಣು ಭಟ್ ಬಂಧಿತ ಆರೋಪಿ. ಈತ ಭೀಮಾ ಜ್ಯುವೆಲ್ಲರ್ಸ್ ಮಾಲೀಕರ ಮಗ ಎಂದು ತಿಳಿದುಬಂದಿದೆ. ಹೆಚ್.ಎಸ್.ಆರ‍್.ಲೇಔಟ್ ಪೊಲೀಸರು ವಿಷ್ಣು ಭಟ್ ನನ್ನು ಬಂಧಿಸಿದ್ದಾರೆ.
ಫೆ.7ರಂದು ಹೋಟೆಲ್ ಬಳಿ ಗಲಾಟೆ ಮಾಡಿ ಹೆಲ್ಮೆಟ್ ನಿಂದ ಬಕ್ ಒಡೆದು ಹಾಕಿದ್ದ. ಫೆ.26ರಂದು ಮತ್ತೆ ಹೋಟೆಲ್ ಬಳಿ ಬಂದ ವಿಷ್ಣು ಭಟ್ ನನ್ನು ಪ್ರಶ್ನೆ ಮಾಡಿದ್ದಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳ ಮಡಿ ಕಬ್ಬಿಣದ ವಸ್ತುವಿನಿಂದ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಂದು ವಿಷ್ಣು ಭಟ್ ನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.