ಲಾಸ್ ಏಂಜಲೀಸ್ : ಬಿಯಾನ್ಸೆ ಅವರ 'ಕೌಬಾಯ್ ಕಾರ್ಟರ್'ಗೆ 2025ನೇ ಸಾಲಿನ 'ವರ್ಷದ ಆಲ್ಬಂ' ಗ್ರ್ಯಾಮಿ ಪ್ರಶಸ್ತಿ ಸಂದಿದೆ.
ಇದುವರೆಗೆ ನಾಲ್ಕು ಬಾರಿ ಈ ವಿಭಾಗದಲ್ಲಿ ಪ್ರಶಸ್ತಿಗೆ ಬಿಯಾನ್ಸೆ ಹೆಸರು ನಾಮನಿರ್ದೇಶಿತವಾಗಿತ್ತು. ಒಮ್ಮೆಯೂ ಅವರಿಗೆ ಪ್ರಶಸ್ತಿ ಸಂದಿರಲಿಲ್ಲ.
21ನೇ ಶತಮಾನದಲ್ಲಿ 'ವರ್ಷದ ಆಲ್ಬಂ' ಗ್ರ್ಯಾಮಿ ಪ್ರಶಸ್ತಿ ಗೆದ್ದ ಮೊದಲ ಕಪ್ಪು ವರ್ಣದ ಮಹಿಳೆ ಎಂಬ ಗೌರವವೂ ಬಿಯಾನ್ಸೆ ಅವರದ್ದಾಗಿದೆ.
'ದಿ ಮಿಸ್‌ಎಡುಕೆಷನ್ ಆಫ್ ಲಾರಿನ್ ಹಿಲ್' ಎಂಬ ಆಲ್ಬಂಗೆ 26 ವರ್ಷಗಳ ಹಿಂದೆ ಲಾರಿನ್ ಹಿಲ್ 'ವರ್ಷದ ಆಲ್ಬಂ' ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು. ಆನಂತರ ಕಪ್ಪು ವರ್ಣದ ಮಹಿಳೆಗೆ ಈ ಪ್ರಶಸ್ತಿ ಲಭಿಸುತ್ತಿರುವುದು ಈಗಲೇ. ಅದಕ್ಕೂ ಮೊದಲು ನತಾಲಿ ಕೋಲ್ ಹಾಗೂ ವಿಟ್ನಿ ಹ್ಯೂಸ್ಟನ್ ಆ ಪ್ರಶಸ್ತಿಯ ಗೌರವ ತಮ್ಮದಾಗಿಸಿಕೊಂಡಿದ್ದ ಕಪ್ಪು ವರ್ಣದ ಮಹಿಳೆಯರೆನಿಸಿದ್ದರು.