ಕಾಸರಗೋಡು: ತಾಲೂಕು ವ್ಯಾಪ್ತಿಯಲ್ಲಿ ಒಳಗೊಂಡ ಭೂಮಿಯ ಕ್ರವಾಂತರ ಬದಲಾವಣೆ ಅರ್ಜಿಗಳ ತೀರ್ಮಾನಗಳಿಗೆ ಸಂಬಂಧಿಸಿದ ಸ್ಥಳ ಪರಿಶೀಲನೆ ನಡೆಸಲು ಸರ್ಕಾರದ ಮಾರ್ಗದರ್ಶನಗಳನ್ನು ಪೂರೈಸಲು ಕ್ರಿಯಾತ್ಮಕವಾಗಿರುವ 5/7 ಸೀಟುಗಳ ಟ್ಯಾಕ್ಸಿ ವಾಹನ ಪರವಾನಗಿಯೊಂದಿಗೆ ಡ್ರೈವರ್ ಸಹಿತ ಒಂದು ವರ್ಷ ಕಾಲಾವಧಿಗೆ ತಿಂಗಳಿಗೆ ಗರಿಷ್ಟ 35 ಸಾವಿರ ರೂ ಬಾಡಿಗೆ ನಿಗದಿಪಡಿಸಿ ಕೊಟೇಶನ್ ಆಹ್ವಾನಿಸಲಾಗಿದೆ. ಕೊಟೇಶನ್ ಮಾರ್ಚ್ 15 ರಂದು ಸಂಜೆ 3 ಗಂಟೆಯೊಳಗೆ ಕಂದಾಯ ವಿಭಾಗೀಯ ಕಚೇರಿ, ಬಂದರು ಕಚೇರಿ ಕಟ್ಟಡ, ಕಾಸರಗೋಡು ಎಂಬ ವಿಳಾಸಕ್ಕೆ ಸಲ್ಲಿಸಬೇಕು. ಅಂದು ಸಂಜೆ 4 ಗಂಟೆಗೆ ಕೊಟೇಶನ್ ತೆರೆಯಲಾಗುವುದು. ಈ ಬಗ್ಗೆ ಮಾಹಿತಿಗಾಗಿ(04994 220081)ದೂರವಾಣಿ ಸಂಕ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.