ಉಪ್ಪಳ: : ಕುಲಾಲ ಸಂಘ ಪೈವಳಿಕೆ ಆಶ್ರಯದಲ್ಲಿ ಮಂಗಳ ಆಸ್ಪತ್ರೆ ಮಂಗಳೂರು ದಯಾ ಲೈಫ್ ಆಸ್ಪತ್ರೆ ಕಾಸರಗೋಡು ಸಹಕಾರದೊಂದಿಗೆ ಉಚಿತ ಮೆಗಾ ಮೆಡಿಕಲ್ ಕ್ಯಾಂಪ್ ಹಾಗೂ ಕಣ್ಣಿನ ಪರೀಕ್ಷೆ ಕುಲಾಲ ಸಮಾಜ ಮಂದಿರ ಪೈವಳಿಕೆಯಲ್ಲಿ ಇತ್ತೀಚೆಗೆ ಜರಗಿತು.
ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮನ್ನಿಪಾಡಿ ಉದ್ಘಾಟಿಸಿದರು. ಪೈವಳಿಕೆ ಕುಲಾಲ ಸಂಘದ ಅಧ್ಯಕ್ಷ ಬಾಬು ಮೂಲ್ಯ ವಾದ್ಯಪಡ್ಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್, ರಾಮಮೂಲ್ಯ ಅಂಗಡಿ ಮೊಗರು, ಸೀನ ಮಾಸ್ತರ್ ಕೋರಿಕ್ಕಾರ್, ವೈದ್ಯರುಗಳಾದ ಮೋಯಿದ್ದೀನ್ ಕುಂಞÂ, ಅಭಿಜಿತ್ ಶೆಟ್ಟಿ, ಶ್ರೇಯಸ್, ಮೋಯಿದ್ದಿನ್ ನಫೀಸರ್, ಮಯೂರ ಪ್ರಭು, ಅಭಯ ನಾರಾಯಣ, ಪ್ರಶಾಂತ್ ಕುಮಾರ್, ಹಾತಿಂ ಹುಸೇನ್ ಮುಂತಾದವರು ಸಹಕರಿಸಿದರು. ಉದಯ ತೆಂಕಮಜಲು ಸ್ವಾಗತಿಸಿ, ಸದಾನಂದ ಚಿಪ್ಪಾರು ವಂದಿಸಿದರು.