ವಾಷಿಂಗ್ಟನ್: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿರುವ, ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಮಾರ್ಚ್ ಮೊದಲ ವಾರ ಅಥವಾ ಮಧ್ಯಭಾಗದಲ್ಲಿ ಭೂಮಿಗೆ ಮರಳುವ ಸಾಧ್ಯತೆಯಿದೆ ಎಂದು ನಾಸಾ ತಿಳಿಸಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ಹಿಂತಿರುಗಲಿದ್ದಾರೆ ಎಂದು ತಿಳಿಸಿತ್ತು.
ಕಳೆದ ವರ್ಷ ಜೂನ್ 5ರಂದು, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಹಾಗೂ ವಿಲ್ಮೋರ್ ಅವರು ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಸಾಧ್ಯವಾಗಿಲ್ಲ.
ಸ್ಟಾರ್‌ಲೈನರ್ ಗಗನನೌಕೆಯು ಈ ಇಬ್ಬರು ಗಗನಯಾತ್ರಿಗಳು ಇಲ್ಲದೆಯೇ ಭೂಮಿಗೆ ಮರಳುವುದು. ಗಗನಯಾತ್ರಿಗಳನ್ನು ಕರೆತರುವುದಕ್ಕೆ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್‌ನ ಗಗನನೌಕೆಯೊಂದನ್ನು ಬಳಸಿಕೊಳ್ಳುವುದಾಗಿ ನಾಸಾ ಆಗಸ್ಟ್‌ನಲ್ಲಿ ಪ್ರಕಟಿಸಿತ್ತು.
ಈಗ, ಇಬ್ಬರು ಗಗನಯಾನಿಗಳನ್ನು ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ಕ್ಯಾಪ್ಸ್ಯುಲ್‌ನಲ್ಲಿ ಮರಳಿ ಭೂಮಿಗೆ ಕರೆತರಲು ನಾಸಾ ಸಿದ್ಧತೆ ನಡೆಸಿದೆ.