HEALTH TIPS

ಟ್ರಂಪ್, ಮೋದಿ....: ಜಾಗತಿಕವಾಗಿ ಬಲಪಂಥೀಯ ನಾಯಕರು ಬಲಿಷ್ಠರಾಗುತ್ತಿರುವುದಕ್ಕೆ ಲಿಬರಲ್ ಗಳಿಗೆ ಉರಿ- ಇಟಾಲಿ ಪ್ರಧಾನಿ

ವಾಷಿಂಗ್ ಟನ್ ಡಿಸಿ: ಡೊನಾಲ್ಡ್ ಟ್ರಂಪ್ ಅಮೆರಿಕಾದಲ್ಲಿ 2ನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ವಿರೋಧಿ ಬಣವಾಗಿರುವ ಲಿಬರಲ್ ಗಳ ವಲಯದಲ್ಲಿ ಅಸಹನೆ ಹೆಚ್ಚಾಗಿರುವುದರ ಬಗ್ಗೆ ಇಟಾಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ರತಿಕ್ರಿಯೆ ನೀಡಿದ್ದಾರೆ. 

ಎಡಪಂಥೀಯರದ್ದು ಬೂಟಾಟಿಕೆ ಎಂದು ಟೀಕಾ ಪ್ರಹಾರ ನಡೆಸಿರುವ, ಜಾಗತಿಕ ಮಟ್ಟದಲ್ಲಿ ಬಲಪಂಥೀಯ ನಾಯಕರು ಬಲಿಷ್ಠಗೊಳ್ಳುತ್ತಿರುವುದು ಲಿಬರಲ್ ನೆಟ್ವರ್ಕ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಮೆಲೋನಿ ಹೇಳಿದ್ದಾರೆ.

ವಾಷಿಂಗ್ ಟನ್ ಡಿಸಿ ಯಲ್ಲಿ ನಡೆದ ಕನ್ಸರ್ವೇಟೀವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ (ಸಿಪಿಎಸಿ) ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಮೆಲೊನಿ, ಡೊನಾಲ್ಡ್ ಟ್ರಂಪ್, ಅಮೆರಿಕ ಉಪಾಧ್ಯಕ್ಷ ಜೆಡಿ ವಾನ್ಸ್, ಪ್ರಧಾನಿ ಮೋದಿ ಅವರನ್ನು ಹೊಗಳಿದ್ದಾರೆ.

ಲಿಬರಲ್ ಗಳಿಗೆ ಬಲಪಂಥೀಯ ನಾಯಕರು ಬಲಿಷ್ಠವಾಗುತ್ತಿರುವುದನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದೇ ಹತಾಶರಾಗುತ್ತಿದ್ದಾರೆ. ಪ್ರಮುಖವಾಗಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಇದು ಹೆಚ್ಚಾಗತೊಡಗಿದೆ.

90ರ ದಶಕದಲ್ಲಿ ಬಿಲ್ ಕ್ಲಿಂಟನ್ ಹಾಗೂ ಟೋನಿ ಬ್ಲೇರ್ ಜಾಗತಿಕ ಲೆಫ್ಟಿಸ್ಟ್ ಲಿಬರಲ್ ನೆಟ್ವರ್ಕ್ ನ್ನು ಸೃಷ್ಟಿಸಿದರು, ಆಗ ಅವರನ್ನು ಮುತ್ಸದ್ದಿ ಎಂದು ಕರೆಯಲಾಗಿತ್ತು, ಈಗ ಟ್ರಂಪ್, ಮೆಲೋನಿ (ಜೇವಿಯರ್) ಮಿಲೀ, ನರೇಂದ್ರ ಮೋದಿ ಅವರು ಮಾತನಾಡಿದರೆ, ಅವರುಗಳನ್ನು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕರೆಯುತ್ತಿದ್ದಾರೆ. ಇದು ಎಡಪಂಥೀಯರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಇದನ್ನು ನಾವು ಹಲವು ವರ್ಷಗಳಿಂದ ಗಮನಿಸುತ್ತಿದ್ದೇವೆ, ಇಷ್ಟೆಲ್ಲದರ ನಡುವೆ ಒಂದು ಒಳ್ಳೆಯ ಸುದ್ದಿ ಏನೆಂದರೆ, ಜನರು ಈ ಎಡಪಂಥೀಯರ ಸುಳ್ಳುಗಳನ್ನು ನಂಬಲು ಈಗ ತಯಾರಿಲ್ಲ. ನಮ್ಮ ಮೇಲೆ ಇವರು ಎಷ್ಟೇ ಕೆಸರು ಎರೆಚಿದರೂ ಜನತೆ ನಮಗೆ ಮತ ಹಾಕಿ ಗೆಲ್ಲಿಸುತ್ತಿದ್ದಾರೆ ಎಂದು ಪ್ರಧಾನಿ ಮೆಲೋನಿ ಹೇಳಿದ್ದಾರೆ.

ಇಟಲಿಯ ನಾಯಕಿ ಅಧ್ಯಕ್ಷ ಟ್ರಂಪ್ ಅವರನ್ನು ಬಾಹ್ಯ ಒತ್ತಡಗಳ ಹೊರತಾಗಿಯೂ ಜಾಗತಿಕ ಕನ್ಸರ್ವೆಟೀವ್ಸ್ (ಸಂಪ್ರದಾಯವಾದಿ) ಗಳೊಂದಿಗೆ ಹೊಂದಿಕೊಂಡ ದೃಢ ನಾಯಕ ಎಂದು ಹೇಳಿದ್ದಾರೆ.

"ಎಡಪಕ್ಷಗಳು ಆತಂಕಗೊಂಡಿವೆ, ಮತ್ತು ಟ್ರಂಪ್ ಅವರ ಗೆಲುವಿನೊಂದಿಗೆ, ಅವರ ಕಿರಿಕಿರಿ ಉನ್ಮಾದವಾಗಿ ಮಾರ್ಪಟ್ಟಿದೆ. ಸಂಪ್ರದಾಯವಾದಿಗಳು ಗೆಲ್ಲುತ್ತಿರುವುದರಿಂದ ಮಾತ್ರವಲ್ಲ, ಸಂಪ್ರದಾಯವಾದಿಗಳು ಈಗ ಜಾಗತಿಕವಾಗಿ ಪರಸ್ಪರ ಸಹಕರಿಸುತ್ತಿರುವುದರಿಂದ, ಎಡಪಂಥೀಯರು ಹತಾಶಗೊಂಡಿದ್ದಾರೆ" ಎಂದು ಮೆಲೋನಿ ಅಭಿಪ್ರಾಯಪಟ್ಟಿದ್ದಾರೆ.

ಇಟಲಿಯ ತೀವ್ರ ಬಲಪಂಥೀಯ ಬ್ರದರ್ಸ್ ಪಕ್ಷದ ನಾಯಕಿಯಾಗಿ, ಜನವರಿಯಲ್ಲಿ ಅಧ್ಯಕ್ಷ ಟ್ರಂಪ್ ಅವರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಏಕೈಕ ಯುರೋಪಿಯನ್ ಒಕ್ಕೂಟದ ಸರ್ಕಾರದ ಮುಖ್ಯಸ್ಥೆ ಪಿಎಂ ಮೆಲೋನಿ ಆಗಿದ್ದಾರೆ.

ಸಿಪಿಎಸಿಯನ್ನು ಉದ್ದೇಶಿಸಿ ಮಾತನಾಡುವ ಪಿಎಂ ಮೆಲೋನಿ ಅವರ ನಿರ್ಧಾರಕ್ಕೆ ರೋಮ್‌ನಲ್ಲಿರುವ ಅವರ ರಾಜಕೀಯ ವಿರೋಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಟ್ರಂಪ್‌ ಅವರ ಮಾಜಿ ಮುಖ್ಯ ತಂತ್ರಜ್ಞ ಸ್ಟೀವ್ ಬ್ಯಾನನ್ ಈ ವಾರ ಸಮ್ಮೇಳನದಲ್ಲಿ ನಾಜಿ ಸೆಲ್ಯೂಟ್ ಬಳಸಿದಂತೆ ಕಂಡುಬಂದ ನಂತರ ವಿವಾದ ತೀವ್ರಗೊಂಡಿತ್ತು.

ಫ್ರಾನ್ಸ್‌ನ ರಾಷ್ಟ್ರೀಯ ರ್ಯಾಲಿ (ಆರ್‌ಎನ್) ಪಕ್ಷದ ನಾಯಕಿ ಜೋರ್ಡಾನ್ ಬಾರ್ಡೆಲ್ಲಾ ಅವರ ನಾಯಕತ್ವದಲ್ಲಿ, ಬ್ಯಾನನ್ ಅವರ ನಡೆಯಲ್ಲಿ "ನಾಜಿ ಸಿದ್ಧಾಂತವನ್ನು ಸೂಚಿಸುವ ಲಕ್ಷಣ" ಎಂದು ವಿವರಿಸಿದ ಕಾರಣ ಸಿಪಿಎಸಿಯಿಂದ ಹಿಂದೆ ಸರಿದ ನಂತರ, ವಿರೋಧ ಪಕ್ಷದ ಸಂಸದರು ಪಿಎಂ ಮೆಲೋನಿ ಅವರ ಭಾಗವಹಿಸುವಿಕೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.

ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವಿನ ಹದಗೆಟ್ಟ ಸಂಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೆಲೋನಿ, ಅಟ್ಲಾಂಟಿಕ್ ಸಾಗರ ಪಾಲುದಾರಿಕೆ ಹಾಗೆಯೇ ಉಳಿದಿದೆ ಎಂದು ಉಲ್ಲೇಖಿಸಿದ್ದು ಗಮನಾರ್ಹವಾಗಿತ್ತು. "ಟ್ರಂಪ್ ನೇತೃತ್ವದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ನಿಕಟವಾಗಿ ಉಳಿಯುತ್ತದೆ" ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಅಧ್ಯಕ್ಷ ಟ್ರಂಪ್ ರಷ್ಯಾಕ್ಕೆ ರಾಜತಾಂತ್ರಿಕ ಸಂಪರ್ಕ ಸಾಧಿಸುವ ಬಗ್ಗೆ ಮತ್ತು ಯುರೋಪ್ ಕಡೆಗೆ, ವಿಶೇಷವಾಗಿ ನ್ಯಾಟೋಗೆ ಸಂಬಂಧಿಸಿದಂತೆ ಅಮೆರಿಕದ ನೀತಿಯಲ್ಲಿ ಬದಲಾವಣೆಯ ಬಗ್ಗೆ ಯುರೋಪ್‌ನಲ್ಲಿ ಕಳವಳಗಳ ನಡುವೆ ಪ್ರಧಾನಿ ಮೆಲೋನಿ ಅವರ ಹೇಳಿಕೆಗಳು ಬಂದಿರುವುದು ಗಮನಾರ್ಹವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries