ಎರ್ನಾಕುಳಂ: ಅರ್ಧ ಬೆಲೆ ವಂಚನೆ ಪ್ರಕರಣದ ಆರೋಪಿಗಳ ಪಟ್ಟಿಯಿಂದ ನಿವೃತ್ತ ನ್ಯಾಯಮೂರ್ತಿ ಸಿ.ಎನ್. ರಾಮಚಂದ್ರನ್ ನಾಯರ್ ಅವರನ್ನು ಪೋಲೀಸರು ತೆಗೆದುಹಾಕಲಿದ್ದಾರೆ.
ಕಾನೂನು ವಿಧಾನಗಳನ್ನು ಅನುಸರಿಸಿ ಅವರನ್ನು ಆರೋಪಿಗಳ ಪಟ್ಟಿಯಿಂದ ತೆಗೆದುಹಾಕುವುದಾಗಿ ಪೋಲೀಸರು ಹೈಕೋರ್ಟ್‍ಗೆ ತಿಳಿಸಿರುವÀರು.
ಅರ್ಧ ಬೆಲೆ ಹಗರಣದಲ್ಲಿ ಪೆರಿಂದಲ್ಮಣ್ಣದ ಪೋಲೀಸರು ನಿವೃತ್ತ ನ್ಯಾಯಮೂರ್ತಿ ಸಿ.ಎನ್. ರಾಮಚಂದ್ರನ್ ನಾಯರ್ ವಿರುದ್ಧ ಆರೋಪ ಹೊರಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ನಿವೃತ್ತ ನ್ಯಾಯಾಧೀಶರು ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ವಿರುದ್ಧ ದೋಷಾರೋಪಣೆ ಮಾಡುವಾಗ ಅನುಸರಿಸಬೇಕಾದ ಮಾನದಂಡಗಳನ್ನು ಪರಿಷ್ಕರಿಸುವಂತೆ ಆದೇಶಿಸಿತ್ತು. ಹೈಕೋರ್ಟ್ ವಿಭಾಗೀಯ ಪೀಠವು ರಾಜ್ಯ ಗೃಹ ಇಲಾಖೆಗೆ ಈ ನಿರ್ದೇಶನ ನೀಡಿತ್ತು. ನ್ಯಾಯಾಧೀಶರು ಕಾನೂನಿಗಿಂತ ಶ್ರೇಷ್ಠರಲ್ಲ ಎಂದು ಸಾರ್ವಜನಿಕರು ಟೀಕಿಸುತ್ತಾರೆ ಮತ್ತು ಟೀಕೆಗಳನ್ನು ಪರಿಗಣಿಸಬೇಕು ಎಂದು ಹೈಕೋರ್ಟ್ ಗಮನಿಸಿದೆ. ಆದರೆ ನ್ಯಾಯಾಧೀಶರ ವಿರುದ್ದ ಪ್ರಕರಣ ದಾಖಲಿಸಲು ನಿರ್ಧರಿಸಿದಾಗ, ಅದು ನ್ಯಾಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗುವಂತೆ ಮತ್ತು ತನಿಖೆಯನ್ನು ಪೂರ್ಣಗೊಳಿಸಲು ಪರಿಸ್ಥಿತಿಗಳನ್ನು ಸೃಷ್ಟಿಸುವಂತೆ ಪ್ರಾಸಿಕ್ಯೂಷನ್ ಮಹಾನಿರ್ದೇಶಕರು ಹೈಕೋರ್ಟ್ ಅನ್ನು ಒತ್ತಾಯಿಸಿದ್ದರು.
ನ್ಯಾಯಮೂರ್ತಿ ಸಿ.ಎನ್. ರಾಮಚಂದ್ರನ್ ನಾಯರ್ ವಿರುದ್ಧ ಪ್ರಸ್ತುತ ಯಾವುದೇ ಪುರಾವೆಗಳಿಲ್ಲ ಎಂದು ಪೋಲೀಸರು ಪ್ರತಿಕ್ರಿಯಿಸಿದರು. ಪೋಲೀಸರ ಪ್ರತಿಕ್ರಿಯೆಯ ಆಧಾರದ ಮೇಲೆ ವಕೀಲರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿ ಮಾಡಿತು.
ಇದನ್ನು ವರದಿ ಮಾಡಿದ್ದಕ್ಕಾಗಿ ಮಾಧ್ಯಮಗಳನ್ನು ದೂಷಿಸಲು ಸಾಧ್ಯವಿಲ್ಲ. ಮಾಧ್ಯಮಗಳಿಗೆ ವರದಿ ಮಾಡುವ ಹಕ್ಕಿದೆ. ನಿವೃತ್ತ ನ್ಯಾಯಾಧೀಶರು ಸೇರಿದಂತೆ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸುವಾಗ ಪೋಲೀಸರು ಸೂಕ್ತ ಜಾಗರೂಕತೆಯನ್ನು ವಹಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ.
ಇದೇ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಲಾಲಿ ವಿನ್ಸೆಂಟ್ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು. ವಂಚನೆಯಲ್ಲಿ ತನ್ನ ಪಾತ್ರವಿಲ್ಲ ಮತ್ತು ವಕೀಲಳಲಾಗಿ ಕಾನೂನು ಸಲಹೆಯನ್ನು ಮಾತ್ರ ನೀಡುತ್ತಿದ್ದೇನೆ ಎಂದು ಲಾಲಿ ತಮ್ಮ ಜಾಮೀನು ಅರ್ಜಿಯಲ್ಲಿ ವಾದಿಸಿದ್ದರು. ಅನಂತು ಕೃಷ್ಣನ್ ಅವರಿಂದ ಪಡೆದ 46 ಲಕ್ಷ ರೂ. ಶುಲ್ಕದ ರೂಪದಲ್ಲಿದೆ ಎಂದು ಲಾಲಿ ವಾದಿಸಿದರು. ರಾಜಕೀಯ ಕಾರಣಕ್ಕಾಗಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲಾಲಿ ವಿನ್ಸೆಂಟ್ ಆರೋಪಿಸಿದ್ದಾರೆ.