ಮುಳ್ಳೇರಿಯ: ಮುಳಿಯಾರ್ ಪೇರಡ್ಕದಲ್ಲಿರುವ ಕುಟುಂಬ ತರವಾಡಿನಲ್ಲಿ ಸಭೆ ಮತ್ತು ಅಭಿನಂದನಾ ಸಮಾರಂಭ ಭಾನುವಾರ ನಡೆಯಿತು.
ಅಭಿನಂದನಾ ಸಮಾರಂಭವನ್ನು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯ ರವೀಂದ್ರನ್ ಪೊಯ್ಯಕಲ್ ಮುಖ್ಯ ಅತಿಥಿಗಳಾಗಿದ್ದರು. ತರವಾಡು ಸಮಿತಿ ಅಧ್ಯಕ್ಷ ದಾಮೋದರನ್ ಕಂಡಿಂಗನಡ್ಕ ಅಧ್ಯಕ್ಷತೆ ವಹಿಸಿದ್ದರು.
ತರವಾಡು ಕಾರ್ನವರ್ ಪಕ್ಕೀರ ಮಣಿಯಾಣಿ, ಸುಕುಮಾರನ್ ತಾಯತ್ ವೀಡು, ರಾಧಾಕೃಷ್ಣನ್ ತಾಯತ್ ವೀಡು, ಬಾಲಕೃಷ್ಣನ್ ಎಡನೀರು, ದಾಮೋದರನ್ ಪೆರಿಯ, ಜಯನ್ ಕೊಡವಂಜಿ, ವೇಣು ಕೊಡವಂಜಿ, ಅಚ್ಯುತನ್ ಮಣಿಯಾಣಿ, ರಘು ಕಣ್ಣಂಗೋಲ್, ಕೊರಗ ಮಣಿಯಾಣಿ, ಸತ್ಯನ್ ಪೇರಡ್ಕ, ಕಾತ್ರ್ಯಾಯಿನಿ ಎಡನೀರು ಮತ್ತು ಡಾ. ಮಂಜುಷಾ ಸಜಿಮೋನ್ ಮಾತನಾಡಿ ಶುಭಾಶಂಸನೆಗೈದರು. ತರವಾಡು ಸಮಿತಿ ಕಾರ್ಯದರ್ಶಿ ರವಿ ಪಾಂಡಿ ಸ್ವಾಗತಿಸಿ, ಮಧುಸೂದನನ್ ಪಾಂಡಿ ವಂದಿಸಿದರು. ಈ ಸಂದರ್ಭ ವಿವಿಧ ವಲಯಗಳ ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು.