ಮನಿಲಾ: ಫಿಲಿಪ್ಪೀನ್ಸ್ ಉಪಾಧ್ಯಕ್ಷೆ ಸಾರಾ ಡುಟೆರ್ಟೆ ಅವರಿಗೆ ವಾಗ್ದಂಡನೆ ವಿಧಿಸುವ ಮತ್ತು ಪದಚ್ಯುತಗೊಳಿಸುವ ಪ್ರಸ್ತಾವವನ್ನು ಜನಪ್ರತಿನಿಧಿಗಳ ಸಭೆ ಅಂಗೀಕರಿಸಿದೆ.
ಸಾರಾ ಅವರು ಮಾಜಿ ಅಧ್ಯಕ್ಷ ರೋಡ್ರಿಗೊ ಡುಟೆರ್ಟೆ ಅವರ ಪುತ್ರಿ. 'ಪದಚ್ಯುತಿ, ವಾಗ್ದಂಡನೆ ನಿರ್ಣಯ ಬೆಂಬಲಿಸಿ 215 ಸದಸ್ಯರು ಸಹಿ ಹಾಕಿದ್ದಾರೆ.
ಇದು, ಅಗತ್ಯಕ್ಕಿಂತಲೂ ಹೆಚ್ಚಿನ ಬೆಂಬಲವಾಗಿದೆ' ಎಂದು ಜನಪ್ರತಿನಿಧಿಗಳ ಸಭೆಯ ಕಾರ್ಯದರ್ಶಿ ಪ್ರಕಟಿಸಿದರು.
ಅಧ್ಯಕ್ಷರಿಗೆ ಜೀವ ಬೆದರಿಕೆಯನ್ನು ಒಡ್ಡಿದ್ದ ಹಾಗೂ ಅಧಿಕಾರ ದುರ್ಬಳಕೆ ಮತ್ತು ಹಣ ದುರುಪಯೋಗ ಕುರಿತು ಸಾರಾ ವಿರುದ್ಧ ಗಂಭೀರ ಆರೋಪಗಳಿದ್ದವು.