ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಬಳಿಕ ನಡೆಯುತ್ತಿರುವ ವμರ್Áವಧಿ ಉತ್ಸವದ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶನಿವಾರ ಶ್ರುತಿಲಯ ಸಂಗೀತ ವಿದ್ಯಾಲಯದ ಗಾನಭೂಷಣ ಮುರಳೀಮಾಧವ ಪೆರಿಂಜೆ ಅವರ ತಂಡದಿಂದ ಶ್ರೀ ಕ್ಷೇತ್ರದಲ್ಲಿ ಭಕ್ತಿಗಾನಮೇಳ ನಡೆಯಿತು.
ಉಮಾಮಹೇಶ್ವರ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ಭಕ್ತಿಗಾನ ಮೇಳದ ಹಾಡುಗಾರಿಕೆಯಲ್ಲಿ ಮುರಳೀ ಮಾಧವ ಪೆರಿಂಜೆ, ಸರಿತಾ, ರೇಖಾ, ಯಧುಕೃಷ್ಣ, ವೈಶಾಖ್, ಆರಾಧ್ಯ, ಶಿಖಾ, ಅಥಿತ್, ಅನುಶ್ರೀ, ಸೀತಾರಾಮ, ಶ್ರೀನಂದ, ಧನುಶ್ರೀ ಸಹಕರಿಸಿದರು. ಕೀಬೋರ್ಡ್‍ನಲ್ಲಿ ಶಿವಾನಂದ ಹಾಗೂ ತಬಲದಲ್ಲಿ ಪ್ರಸನ್ನ ಸಹಕರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಕೊನೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಗಂಗಾಧರ್ ತೆಕ್ಕೆಮೂಲೆ ಅವರು ಶ್ರೀ ಕ್ಷೇತ್ರದ ಪ್ರಸಾದ ನೀಡಿದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಗಂಗಾಧರ ರೈ ಮಠದಮೂಲೆ, ಉಪಾಧ್ಯಕ್ಷ ಡಾ. ಶ್ರೀಧರ್ ಮಂಗಳೂರು, ಶ್ಯಾಮಲ ಟೀಚರ್, ಕಲಾವತಿ ಬಿ. ಮತ್ತಿತರರು ಉಪಸ್ಥಿತರಿದ್ದರು.