ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ 11ನೇ ವಾರ್ಡಿನ ಪಾಟ್ಲದಳ ಪರಿಶಿಷ್ಟ ವರ್ಗದ ಸಮುದಾಯ ಕೇಂದ್ರವನ್ನು ಪಂಚಾಯತಿ ಯೋಜನೆಯಂತೆ ನವೀಕರಿಸಿ ಹಸ್ತಾಂತರಿಸಲಾಯಿತು. ಈ ಹಿಂದೆ ಪಾಳು ಬಿದ್ದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು 2024-25ರ ಯೋಜನೆಯಲ್ಲಿ ಇದನ್ನು ನವೀಕರಿಸಲಾಗಿದೆ. ಈ ಬಗ್ಗೆ ಕೀಲಿಕೈ ಹಸ್ತಾಂತರ ಕಾರ್ಯಕ್ರಮವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು.
ವಾರ್ಡ್ ಸದಸ್ಯ ರಾಧಾಕೃಷ್ಣ ನಾಯಕ್ ಶೇಣಿ ಅಧ್ಯಕ್ಷತೆವಹಿಸಿದ್ದರು.ಸಮುದಾಯ ಗುರಿಕಾರ ಶಿವನಾಯ್ಕ, ಎಸ್.ಟಿ.ಪ್ರಮೋಟರ್ ಸಂಧ್ಯಾ ಕೆ, ಗುತ್ತಿಗೆದಾರ ಆಶ್ರಫ್ ಬೆದ್ರಂಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮುದಾಯ ಕೇಂದ್ರ ನಿರ್ವಹಣೆಗಾಗಿ ಸಮುದಾಯಿಕ ಸಮಿತಿಯೊಂದನ್ನು ರಚಿಸಿ ಜವಾಬ್ದಾರಿ ನೀಡಲಾಯಿತು. ರಾಜೇಶ್ ನಾಯ್ಕ್ (ಅಧ್ಯಕ್ಷರು), ಭಾರತಿ (ಕಾರ್ಯದರ್ಶಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಧ್ಯಾ ಕೆ, ತುಳಸಿ, ವಸಂತ ಕೆ.ಕೆ.ಕಾಡು, ಗೋವಿಂದ ನಾಯ್ಕ್, ಚಿತ್ರಕಲಾ ಬಲ್ತಕಲ್ಲು ಆಯ್ಕೆಯಾದರು.