ಮ್ಯೂನಿಚ್ (AP): ಯುರೋಪ್‌ಗಾಗಿ ವಿಶೇಷ ಸಶಸ್ತ್ರ ಪಡೆಯನ್ನು ರಚಿಸುವ ಸಮಯ ಬಂದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಶನಿವಾರ ಹೇಳಿದ್ದಾರೆ.
ರಷ್ಯಾದೊಂದಿಗಿನ ಉಕ್ರೇನ್‌ನ ಹೋರಾಟವು 'ಯುರೋಪ್ ಸಶಸ್ತ್ರ ಪಡೆ' ರಚನೆಗೆ ಭದ್ರ ಬುನಾದಿಯನ್ನೇ ಹಾಕಿಕೊಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕ ಯುರೋಪ್‌ನೊಂದಿಗೆ ಕೆಲ ಭಿನ್ನಾಭಿಪ್ರಾಯಗಳನ್ನು ಹೊಂದಿದೆ. ಹೀಗಾಗಿ, ಸಂಕಷ್ಟದ ಸಮಯದಲ್ಲಿ ಅಮೆರಿಕವು ಭದ್ರತಾ ನೆರವು ನೀಡಲು ನಿರಾಕರಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಯುರೋಪ್ ತನ್ನದೇ ಆದ ಬಲಿಷ್ಠ ಸೇನೆಯನ್ನು ಹೊಂದಿರಬೇಕು ಎಂಬುದಾಗಿ ಹಲವು ನಾಯಕರು ಈ ಹಿಂದೆಯೇ ಹೇಳಿದ್ದಾರೆ ಎಂದು ಝೆಲೆನ್‌ಸ್ಕಿ ಅವರು ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಹೇಳಿದ್ದಾರೆ.
ರಷ್ಯಾ ವಶಕ್ಕೆ ಬೆರೆಝಿವ್ಕ ನಗರ
ಮಾಸ್ಕೊ (ರಾಯಿಟರ್ಸ್): ಉಕ್ರೇನ್‌ನ ಪೂರ್ವ ಭಾಗದ ಡೊನೆಟ್‌ಸ್ಕ್ ವಲಯದಲ್ಲಿರುವ ಬೆರೆಝಿವ್ಕ ನಗರವನ್ನು ತಮ್ಮ ಸೇನೆಯು ವಶಕ್ಕೆ ಪಡೆದಿರುವುದಾಗಿ ರಷ್ಯಾದ ವಿದೇಶಾಂಗ ಸಚಿವಾಲಯವು ಶನಿವಾರ ತಿಳಿಸಿದೆ.