ಕುಂಬಳೆ: ಶಿರಿಯದ ರೈಲ್ವೆ ಹಳಿ ಸನಿಹದ ಕುರುಚಲು ಪೊದೆಯಲ್ಲಿ ಮಾನವ ತಲೆಬುರುಡೆ ಹಾಗೂ ಅಸ್ಥಿಪಂಜರ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿದ ಕುಂಬಳೆ ಠಾಣೆ ಪೊಲೀಸರು, ತಲೆಬುರುಡೆ ಮತ್ತು ಅಸ್ಥಿಪಂಜರವನ್ನು ಉನ್ನತ ಮಹಜರಿಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಅಸ್ಪತ್ರೆಗೆ ರವಾನಿಸಿದ್ದಾರೆ.
ರೈಲ್ವೆ ಹಳಿ ಸನಿಹದಿಂದ ಕಾಲ್ನಡೆಯಾಗಿ ತೆರಳುತ್ತಿದ್ದವರಿಗೆ ತಲೆಬುರುಡೆ ಕಾಣಿಸಿದ್ದು, ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸ್ಥಿಪಂಜರ ಪತ್ತೆಯಾದ ಸ್ಥಳದಲ್ಲಿ ಗುಲಾಬಿ ಬಣ್ಣದ ಟಿ ಶರ್ಟ್ ಹಾಗೂ ಬರ್ಮುಡ ಪತ್ತೆಯಾಗಿದ್ದುಡಿದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವ್ಯಕ್ತಿಯನ್ನು ಕೊಲೆಗೈದು ತಂದು ಹಾಕಿರುವ ಬಗ್ಗೆಯೂ ಸಂಶಯಿಸಲಾಗುತ್ತಿದೆ. ಅಲ್ಲದೆ ರೈಲು ಗಾಡಿ ಡಿಕ್ಕಿಯಾಗಿ ಅಥವಾ ರೈಲಿನಿಂದ ಬಿದ್ದು ಸಾವು ಸಂಭವಿಸಿರುವ ಸಾಧ್ಯತೆಯಿದೆ. ಆರು ತಿಂಗಳ ಹಿಂದೆ ಸಾವು ಸಂಭವಿಸಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.