HEALTH TIPS

ಐವಿಎಫ್‌ ವೆಚ್ಚ ತಗ್ಗಿಸುವ ಕಾರ್ಯಾದೇಶಕ್ಕೆ ಟ್ರಂಪ್‌ ಸಹಿ

Top Post Ad

Click to join Samarasasudhi Official Whatsapp Group

Qries

ವೆಸ್ಟ್‌ ಪಾಮ್‌ ಬೀಚ್‌: ಐವಿಎಫ್‌ (ಫಲವತ್ತತೆ) ಸೌಲಭ್ಯದ ವೆಚ್ಚವನ್ನು ತಗ್ಗಿಸುವ ಉದ್ದೇಶದ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಿದ್ದು ಆಡಳಿತದಲ್ಲಿ ‍ಪಾರದರ್ಶಕತೆ ತರಲು ಮತ್ತು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ಮತ್ತೊಂದು ಆದೇಶದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿರುವ ಲೋಪಗಳ ಬಗ್ಗೆ ಹೇಳಲಾಗಿದೆ. ಆಡಳಿತ ನಿರ್ವಹಣೆ ಮತ್ತು ಬಜೆಟ್‌ ಮೇಲ್ವಿಚಾರಣೆಯ ಬಗ್ಗೆಯೂ ವಿವರಿಸಲಾಗಿದೆ. 'ಅನಗತ್ಯ ವೆಚ್ಚ, ವಂಚನೆ ಹಾಗೂ ದುರ್ಬಳಕೆ' ತಡೆಯುವುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಉಕ್ರೇನ್‌- ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸಲು ತನಗೆ ಉತ್ತಮ ಅವಕಾಶ ಇದೆ ಎಂದು ಹೇಳಿರುವ ಟ್ರಂಪ್, ಉಕ್ರೇನ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯುದ್ಧ ಕೊನೆಗೊಳಿಸಲು ಅಮೆರಿಕ ಮತ್ತು ರಷ್ಯಾ ಮಾತುಕತೆ ಆರಂಭಿಸಿವೆ ಎಂಬುದನ್ನು ಅಲ್ಲಗಳೆದಿದ್ದಾರೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries