ಕಾರ್ಸನ್ ಸಿಟಿ: ಅಮೆರಿಕದ ನೆವಾಡದ ಜಾನುವಾರುಗಳಲ್ಲಿ ಹೊಸ ಬಗೆಯ ಹಕ್ಕಿಜ್ವರ ಪತ್ತೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
'ಸೋಂಕಿಗೆ ಕಾರಣವಾಗಿರುವ ಟೈಪ್ ಎ ಎಚ್5ಎನ್1 ವೈರಸ್‌ನ ವಿಭಿನ್ನ ರೂಪಗಳು ಕಾಡುಪಕ್ಷಿಗಳಿಂದ ಜಾನುವಾರುಗಳಿಗೆ ತಗುಲಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ನೆವಾಡದ ಜಾನುವಾರುಗಳಿಂದ ಹಾಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಲಾಗಿತ್ತು. ಅದರಲ್ಲಿ ಡಿ1.1 ಮಾದರಿಯ ಹಕ್ಕಿಜ್ವರದ ಸೋಂಕು ಪತ್ತೆಯಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಅಮೆರಿಕದಲ್ಲಿ ಕನಿಷ್ಠ 67 ಜನರು ಹಕ್ಕಿಜ್ವರದ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ ಹೆಚ್ಚಿನವರು ಜಾನುವಾರುಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವವರು' ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ತಿಳಿಸಿದೆ.