ಮಹಾಕುಂಭ ನಗರ : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭೇಟಿ ನೀಡಿರುವ ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಅವರ ಕುಟುಂಬ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದೆ.
'ಮಹಾ ಕುಂಭಮೇಳವು ದೇಶದ ಪ್ರಾಚೀನ ಸಂಪ್ರದಾಯಗಳನ್ನು ಸಾಕಾರಗೊಳಿಸುತ್ತದೆ.
ಧಾರ್ಮಿಕ ಸಭೆಯು ಏಕತೆಯನ್ನು ಸಂಕೇತಿಸುತ್ತದೆ. ಪ್ರಪಂಚದಾದ್ಯಂತ ಇರುವ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಪ್ರಾಚೀನ ಸಂಪ್ರದಾಯಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನಗಳಿಗಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ರಾಜೇಂದ್ರ ಶ್ಲಾಘಿಸಿದ್ದಾರೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್‌ಎಸ್‌ಇ)ದ ಸಿಇಒ ಆಶಿಶ್ ಚೌಹಾಣ್ ಮತ್ತು ಅವರ ಪತ್ನಿ ಸೋನಲ್ ಚೌಹಾಣ್ ಅವರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಕೂಡ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
'ಮಹಾ ಕುಂಭವು ಕೇವಲ ಧಾರ್ಮಿಕ ಕಾರ್ಯಕ್ರಮ ಮಾತ್ರವಲ್ಲ, ಅದು ವಿಶ್ವ ಶಾಂತಿಯ ಸಂದೇಶವಾಹಕವಾಗಿದೆ. ಇಲ್ಲಿಂದ ಮನೆಗಳಿಗೆ ಹಿಂದಿರುಗುವ ಜನರು ಶಾಂತಿ ಮತ್ತು ಪ್ರೀತಿಯ ಸಂದೇಶವನ್ನು ತೆಗೆದುಕೊಂಡು ಹೋಗುತ್ತಾರೆ. ಇದು ಅವರ ಮನೆಗಳು, ಸಮಾಜ ಮತ್ತು ದೇಶವನ್ನು ಉತ್ತಮಗೊಳಿಸುತ್ತದೆ. ಅಂತಿಮವಾಗಿ ಇಡೀ ಮಾನವೀಯತೆಯು ಶ್ರೇಷ್ಠವಾಗುತ್ತದೆ' ಎಂದು ಅಣ್ಣಾಮಲೈ ಬಣ್ಣಿಸಿದ್ದಾರೆ.