ಕಾಸರಗೋಡು: ಮಲಬಾರ್ ದೇವಸ್ವಂ ಮಂಡಳಿಯಡಿಯಲ್ಲಿರುವ ಕಾಸರಗೋಡು ತಾಲೂಕಿನ ಬೇಡಡ್ಕದ ಅಡುಕತ್ತ ಶ್ರೀ ಭಗವತಿ ಕ್ಷೇತ್ರದಲ್ಲಿ ತೆರವಾಗಿರುವ ಐದು ಸಾಂಪ್ರಾದಾಯಿಕ ಟ್ರಸ್ಟಿಗಳು ಹಾಗೂ ತಾಲೂಕಿನ ಕೊಟ್ಟಿಕುಲಂನಲ್ಲಿರುವ ಕರಿಪೆÇೀಡಿ ಶ್ರೀ ಶಾಸ್ತಾ-ವಿಷ್ಣು ಕ್ಷೇತ್ರದಲ್ಲಿ ನಾಲ್ಕು ಸಾಂಪ್ರದಾಯಿಕ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಆಸುಪಾಸು ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಮಲಬಾರು ದೇವಸ್ವಂ ಮಂಡಳಿ, ಕಾಸರಗೋಡು ವಿಭಾಗ ನೀಲೇಶ್ವರದ ಸಹಾಯಕ ಆಯುಕ್ತರ ಕಛೇರಿಯಲ್ಲಿ ಹಾಗೂ ಮಲಬಾರು ದೇವಸ್ವಂ ಮಂಡಳಿ ವೆಬ್‍ಸೈಟ್ ನಿಂದ ಲಭಿಸುವುದು. ಭರ್ತಿ ಮಾಡಿದ ಅರ್ಜಿಗಳನ್ನು ಫೆ. 28ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.