ನವದೆಹಲಿ: ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ಒತ್ತಡ ನಿವಾರಣೆ ಮತ್ತು ಸುಲಭದ ಕಲಿಕೆಗೆ ಅನುವಾಗುವ ಸಲಹೆಗಳನ್ನು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಶನಿವಾರ ನೀಡಿದರು.
ಪ್ರಧಾನ ಮಂತ್ರಿಯವರ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದ್ಗುರು, ಅತಿಯಾಗಿ ಚಿಂತಿಸುವುದನ್ನು ನಿಯಂತ್ರಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
'ಇಲ್ಲಿಯವರೆಗೆ ಶಾಲೆಯಲ್ಲಿ ನಿಮ್ಮ ಫಲಿತಾಂಶ ಉತ್ತಮವಾಗಿ ಇಲ್ಲದಿದ್ದರೂ ಪರವಾಗಿಲ್ಲ. ಪಠ್ಯಪುಸ್ತಕಗಳು ನಿಮ್ಮ ಬುದ್ಧಿವಂತಿಕೆಗೆ ಸವಾಲಲ್ಲ. ಅನಗತ್ಯವಾಗಿ ಒತ್ತಡವನ್ನು ತೆಗೆದುಕೊಳ್ಳುತ್ತಿದ್ದೀರಿ. ಕಲಿಕೆಯನ್ನು ಸುಲಭವಾಗಿ ತೆಗೆದುಕೊಂಡರೆ, ಪಠ್ಯಪುಸ್ತಕಗಳು ಸವಾಲೇನೂ ಆಗಿರುವುದಿಲ್ಲ' ಎಂದು ಸದ್ಗುರು ಹೇಳಿದರು.