ಮುಳ್ಳೇರಿಯ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ 7ನೇ ದಿನ ಶನಿವಾರ ಪ್ರಾತಃಕಾಲ ಗಣಪತಿ ಹೋಮ, ಇಂದ್ರಾದಿ ದಿಕ್ಪಾಲಕ ಪ್ರತಿಷ್ಠೆ, ಸಪ್ತ ಮಾತೃಕಾ ಪ್ರತಿಷ್ಠೆ, ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರ ಪೂಜೆ, ಸೋಪಾನ ಪೂಜೆ ನಡೆಯಿತು. ವಿವಿಧ ಭಜನ ಸಂಘಗಳಿಂದ ಭಜನೆ, ಕುಣಿತ ಭಜನೆ ನಡೆಯಿತು.
ಸಾಂಸ್ಕøತಿಕ ವೇದಿಕೆಯಲ್ಲಿ ನಂದಿತಾ ಪೈ ನಾರಾಯಣಿ ಸಂಗೀತ ಕಲಾಕೇಂದ್ರ ಮಂಗಳೂರು ಇವರಿಂದ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ಹಾಗೂ ಭಜನ್, ಲಕ್ಷ್ಮೀಶ ಬೇಂಗ್ರೋಡಿ ಮತ್ತು ಬಳಗದವರಿಂದ ಯಕ್ಷಗಾನ ವೈಭವ, ವಾಗ್ದೇವಿ ಮ್ಯೂಸಿಕಲ್ಸ್ ಪಂಜಿಕಲ್ಲು ಇವರಿಂದ ಭಕ್ತಿಗಾನಾಮೃತ, ತೇಜಸ್ವಿನಿ ನವೀನ್ ಗೌಡ ಕುಕ್ಕುಡೇಲು ಎಸ್ಟೇಟ್ ಇವರ ಸಮರ್ಥ ಸಾಂಸ್ಕøತಿಕ ಕಲಾತಂಡ ಈಶ್ವರ ಮಂಗಲ ಇವರಿಂದ ನೃತ್ಯ ಗಾಯನ, ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಾಟ್ಯರಂಗ ಪುತ್ತೂರು ಇವರಿಂದ ಭರತನಾಟ್ಯ, ಟೀಮ್ ಗೌರಿಯಡ್ಕ ಮವ್ವಾರು ಫ್ಯೂಶನ್ ಡ್ಯಾನ್ಸ್, ವಿದ್ಯಾ ಮನೋಜ್ ಕಲಾನಿಕೇತನ್ ಡ್ಯಾನ್ಸ್ ಪೌಂಡೇಶನ್ ಕಲ್ಲಡ್ಕ ಇವರಿಂದ ಭರತನಾಟ್ಯ ಮತ್ತು ನೃತ್ಯ ವೈವಿಧ್ಯ ಜನಮನಸೂರೆಗೊಂಡಿತು.
ಇಂದು ನಡೆಯುವ ಕಾರ್ಯಕ್ರಮಗಳು :
ಫೆ.09 ಭಾನುವಾರ ಬೆಳಗ್ಗೆ ಗಣಪತಿ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ್ತ ಹೋಮ, ತತ್ವಹೋಮ, ತತ್ವಕಲಶಪೂಜೆ, ಕುಂಭೇಶ ಕರ್ಕರೀಪೂಜೆ, ಅಂಕುರ ಪೂಜೆ, ಸೋಪಾನ ಪೂಜೆ, ಬ್ರಹ್ಮಕಲಶ ಪೂಜೆ ನಡೆಯಲಿದೆ. ಸಂಜೆ ಪರಿಕಲಶ ಪೂಜೆ, ಅವಾಸ ಹೋಮ, ಅವಾಸ ಬಲಿ, ಕಲಶಾವಾಸ, ಸೋಪಾನಪೂಜೆ, ಮಹಾಬಲಿ, ಪೀಠಾವಾಸ ನಡೆಯಲಿದೆ. ಬೆಳಗ್ಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಮಾರಿ ಅಕ್ಷಯಾ ಗೋಖಲೆ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡುವರು. . 1.30ರಿಂದ ಕುಮಾರಿ ಸುಮಶ್ರೀ ಮತ್ತು ಬಳಗ ಇಡಿಯಡ್ಕ ಪೆರ್ಲ ಇವರಿಂದ ಭಕ್ತಿರಸಮಂಜರಿ, 3.30ರಿಂದ 5.45ರ ತನಕ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ, ಸಂಜೆ 6ರಿಂದ 7ರ ತನಕ ಯೋಗಾ ಫಾರ್ ಕಿಡ್ಸ್ ಕರಂದಕ್ಕಾಡು ಇವರಿಂದ ಯೋಗನೃತ್ಯ, 7ರಿಂದ 11ರ ತನಕ ನಾಟ್ಯನಿಲಯಂ ಮಂಜೇಶ್ವರ ಇವರಿಂದ ವಿದ್ವಾನ್ ಬಾಲಕೃಷ್ಣ ಮಾಸ್ತರ್ ಇವರ ತಂಡದಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ.