HEALTH TIPS

ಪ್ರತೀಕೂಲ ಹವಾಮಾನ: ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಗಾಲದ ರಜೆ ವಿಸ್ತರಣೆ

Top Post Ad

Click to join Samarasasudhi Official Whatsapp Group

Qries

ಶ್ರೀನಗರ: ಪ್ರತಿಕೂಲ ಹವಾಮಾನದ ಕಾರಣ ಕಣಿವೆ ಮತ್ತು ಜಮ್ಮು ವಿಭಾಗದ ಚಳಿಗಾಲದ ವಲಯ ಪ್ರದೇಶಗಳಲ್ಲಿನ ಶಾಲೆಗಳಿಗೆ ಚಳಿಗಾಲದ ರಜೆಯನ್ನು ಆರು ದಿನಗಳವರೆಗೆ ವಿಸ್ತರಿಸಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶುಕ್ರವಾರ ಆದೇಶಿಸಿದೆ.

ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡ ಆದೇಶದ ಪ್ರಕಾರ ಶಾಲೆಗಳು ಮಾರ್ಚ್ 7 ರಂದು ಮತ್ತೆ ತೆರೆಯಲಿವೆ.

ಜಮ್ಮು-ಕಾಶ್ಮೀರ ಸಚಿವೆ ಸಕಿನಾ ಇಟೂ ಅವರು ಆದೇಶ ಪ್ರತಿಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಜಮ್ಮು ವಿಭಾಗದ ಕಣಿವೆ ಮತ್ತು ಚಳಿಗಾಲದ ವಲಯ ಪ್ರದೇಶಗಳಲ್ಲಿನ ಶಾಲೆಗಳಲ್ಲಿ ಓದುತ್ತಿರುವ 5 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಡಿಸೆಂಬರ್ 10 ರಿಂದ ಫೆಬ್ರವರಿ 28 ರವರೆಗೆ ರಜೆ ಸಾರಲಾಗಿತ್ತು.

5 ರಿಂದ 12 ನೇ ತರಗತಿಗಳಿಗೆ, ಡಿಸೆಂಬರ್ 16 ರಿಂದ ಫೆಬ್ರವರಿ 28 ರವರೆಗೆ ಚಳಿಗಾಲದ ರಜೆ ಘೋಷಿಸಲಾಗಿತ್ತು.

ಮಾರ್ಚ್ 1 ರಂದು ಶಾಲೆ ಪುನಾರಂಭಿಸಲು ನಿರ್ಧರಿಸಲಾಗಿತ್ತು.

ಆದಾಗ್ಯೂ, ಪ್ರತಿಕೂಲ ಹವಾಮಾನ ಮತ್ತು ಮಾರ್ಚ್ 3 ರವರೆಗೆ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ, ಸರ್ಕಾರ ಶುಕ್ರವಾರ ಮಾರ್ಚ್ 6 ರವರೆಗೆ ರಜೆಯನ್ನು ವಿಸ್ತರಿಸಿದೆ.

ಶುಕ್ರವಾರ ಕಾಶ್ಮೀರದಲ್ಲಿ ರಾತ್ರಿಯಿಡೀ ಹಿಮಪಾತವಾಗಿದ್ದರಿಂದ ರೈಲು, ವಿಮಾನ ಮತ್ತು ರಸ್ತೆ ಸಾರಿಗೆ ಮೇಲೆ ಪರಿಣಾಮ ಬೀರಿದೆ. ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ, ಮಣ್ಣು ಕುಸಿತ ಸಂಭವಿಸಿವೆ.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries