ಪಾಲಕ್ಕಾಡ್: ಅರ್ಧ ಬೆಲೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರ ಕಚೇರಿಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಸಚಿವ ಕೆ. ಕೃಷ್ಣನ್ ಕುಟ್ಟಿ ಅವರ ಕಚೇರಿಯಿಂದ ಹಣವನ್ನು ಸಂಗ್ರಹಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಲ್ಲೆಪ್ಪಿಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಪ್ರೀತಿ ರಾಜನ್ ಅವರು ತಮ್ಮಿಂದ ಹಣವನ್ನು ಪಡೆದಿದ್ದರು ಎಂದು ಗೃಹಿಣಿಯರು ಹೇಳುತ್ತಾರೆ. ಜನತಾದಳ (ಎಸ್) ಸದಸ್ಯೆ ಪ್ರೀತಿ ರಾಜನ್ ವಿರುದ್ಧ ಹೆಚ್ಚಿನ ದೂರುಗಳು ಬಂದಿವೆ.
ನಲ್ಲೆಪ್ಪಿಲ್ಲಿ, ಕೊಳಿಂಜಂಪಾರ, ಚಿತ್ತೂರು ಮತ್ತು ತಟ್ಟಮಂಗಲಂನಂತಹ ಪ್ರದೇಶಗಳಿಂದ 300 ಕ್ಕೂ ಹೆಚ್ಚು ಮಹಿಳೆಯರು ವಂಚನೆಗೆ ಬಲಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಚಿತ್ತೂರು ಪೋಲೀಸ್ ಠಾಣೆಗೆ ಸುಮಾರು 100 ದೂರುಗಳು ಬಂದಿವೆ. ಸಚಿವರ ಪಕ್ಷದ ಪದಾಧಿಕಾರಿಗಳು ಮತ್ತು ಪಂಚಾಯತ್ ಸದಸ್ಯರು ಸೇರಿದಂತೆ ಜನರು ತಮ್ಮನ್ನು ಸಂಪರ್ಕಿಸಿ ಅರ್ಧ ಬೆಲೆಗೆ ಸ್ಕೂಟರ್‍ಗಳು ಲಭಿಸುವ ಬಗ್ಗೆ ಹೇಳಿದ್ದರು ಎಂದು ಗೃಹಿಣಿಯರು ಹೇಳುತ್ತಾರೆ.
ಇದು ಸರ್ಕಾರಿ ಯೋಜನೆ ಎಂದು ತಮಗೆ ತಿಳಿಸಲಾಗಿತ್ತು ಎಂದು ಗೃಹಿಣಿಯರು ಹೇಳುತ್ತಾರೆ. ಕೆಲವು ದೂರುದಾರರು, ತಾವು ಹಣ ಪಾವತಿಸಲು ಹೋದಾಗ ಸಚಿವರು ಅಲ್ಲಿದ್ದರು ಮತ್ತು ಮುಂದಿನ ಕೋಣೆಗೆ ಹೋದ ನಂತರವೇ ಅವರು ಹಣವನ್ನು ಹಸ್ತಾಂತರಿಸಿದರು ಎಂದು ಹೇಳಿದರು. ಸಚಿವರ ಕಚೇರಿಯಲ್ಲಿ ಹಣದ ವ್ಯವಹಾರ ನಡೆದ ಕಾರಣ ತಮಗೆ ಹೆಚ್ಚಿನ ಆತ್ಮವಿಶ್ವಾಸ ಮೂಡಿತು ಎಂದು ಗೃಹಿಣಿಯರು ಹೇಳುತ್ತಾರೆ.
ಈ ಮಧ್ಯೆ, ಅರ್ಧ ಬೆಲೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಕಚೇರಿ ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂಬುದು ಸಚಿವ ಕೆ. ಕೃಷ್ಣನ್ ಕುಟ್ಟಿ ಅವರ ನಿಲುವು. ಈ ಸಂಬಂಧ ಆರೋಪಗಳು ಬಂದ ತಕ್ಷಣ ಪೋಲೀಸರಿಗೆ ದೂರು ನೀಡಲು ಮಧ್ಯಪ್ರವೇಶಿಸಿದ್ದೇನೆ ಎಂದು ಸಚಿವರು ಪ್ರತಿಕ್ರಿಯಿಸಿದರು.