ತಿರುವನಂತಪುರಂ: ಆಶಾ ಕಾರ್ಯಕರ್ತೆಯರು ಆಹೋರಾತ್ರಿ ನಡೆಸುತ್ತಿರುವ ಸೆಕ್ರಟರಿಯೇಟ್ ನ ಪ್ರತಿಭಟನಾ ಸ್ಥಳಕ್ಕೆ ಹೆಚ್ಚಿನ ಕಾರ್ಯಕರ್ತೆಯರನ್ನು ಕರೆತರುವ ಮೂಲಕ ಮುಷ್ಕರವನ್ನು ತೀವ್ರಗೊಳಿಸಲು ಆಶಾ ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ.
ಗೌರವಧನ ಹೆಚ್ಚಳ ಮತ್ತು ನಿವೃತ್ತಿ ಸೌಲಭ್ಯಗಳ ಘೋಷಣೆಯ ಬೇಡಿಕೆಗಳು ಅಂಗೀಕರಿಸಲ್ಪಡುವವರೆಗೆ ಆಶಾ ಸಂಘಟನೆಯು ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಆಶಾಕಾರ್ಯಕರ್ತೆಯರು ಮಾಹಿತಿ ನೀಡಿರುವರು. ಮೂರು ತಿಂಗಳ ಬಾಕಿ ಹಣದಲ್ಲಿ ಎರಡು ತಿಂಗಳ ಬಾಕಿ ಹಣವನ್ನು ಸರ್ಕಾರ ಮಂಜೂರು ಮಾಡಿತ್ತು. ಆದರೆ ಒಂದು ತಿಂಗಳ ಗೌರವಧನ ಮಾತ್ರ ಸಿಕ್ಕಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಕೇರಳ ಆಶಾ ಆರೋಗ್ಯ ಕಾರ್ಯಕರ್ತರ ಸಂಘವು ರಾಜ್ಯದಲ್ಲಿ 27,000 ಆಶಾ ಕಾರ್ಯಕರ್ತರು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಘೋಷಿಸಿದೆ. ಮನೆ ಬಾಗಿಲಿಗೆ ಸೇವೆಗಳು ಮತ್ತು ಜನಗಣತಿ ಸೇರಿದಂತೆ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.
ಆಶಾ ಕಾರ್ಯಕರ್ತರು ಈ ತಿಂಗಳ 10 ರಂದು ಸಚಿವಾಲಯದ ಮುಂದೆ ತಮ್ಮ ಮುಷ್ಕರವನ್ನು ಪ್ರಾರಂಭಿಸಿದ್ದರು. ಆರೋಗ್ಯ ಸಚಿವರೊಂದಿಗೆ ಹಲವಾರು ಬಾರಿ ಚರ್ಚೆ ನಡೆಸಿದರೂ ಬೇಡಿಕೆಗಳನ್ನು ಸ್ವೀಕರಿಸಲಾಗಿಲ್ಲ.
ಆಶಾ ಕಾರ್ಯಕರ್ತೆಯರು ಗೌರವ ಧನ ಮತ್ತು ಭತ್ಯೆ ಸೇರಿದಂತೆ 9,000 ರೂ. ವೇತನಪಡೆಯುತ್ತಿದ್ದಾರೆ, ಮತ್ತೊಂದಡೆ ಆರೋಗ್ಯ ಸಚಿವರ ಕಚೇರಿ ಅವರು 13,200 ರೂ.ವರೆಗೆ ಪಡೆಯುತ್ತಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ
ಕಾರ್ಯಕರ್ತರ ಗೌರವಧನ ಸೇರಿದಂತೆ ಯಾವುದೇ ವಿಷಯಗಳಿಗೆ ಕೇರಳಕ್ಕೆ ಬಾಕಿ ಪಾವತಿಉಳಿದಿಲ್ಲ ಎಂದು ಕೇಂದ್ರವು ಸ್ಪಷ್ಟಪಡಿಸಿದೆ.
2024-25ನೇ ಆರ್ಥಿಕ ವರ್ಷಕ್ಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೇರಳಕ್ಕೆ ಗೌರವಧನ ಸೇರಿದಂತೆ 913.24 ಕೋಟಿ ರೂ.ಗಳನ್ನು ಹಂಚಿಕೆ ಮಾಡಬೇಕಿದ್ದಲ್ಲಿ. ಕೇರಳಕ್ಕೆ 938.80 ಕೋಟಿ ರೂ. ಹಂಚಿಕೆಯಾಗಿದ್ದು, ಇದು 25 ಕೋಟಿ ರೂ. ಹೆಚ್ಚಿನ ಮೊತ್ತವಾಗಿದೆ. ಈ ಮೊತ್ತವನ್ನು ನಾಲ್ಕು ಕಂತುಗಳಲ್ಲಿ ಹಂಚಿಕೆ ಮಾಡಲಾಯಿತು. ಇದಲ್ಲದೆ, ಹಳೆಯ ಬಾಕಿ ಪಾವತಿಸಲು ಫೆಬ್ರವರಿ 12 ರಂದು ರಾಜ್ಯಕ್ಕೆ ಐದನೇ ಬಾರಿಗೆ 120.45 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು.