ವಯನಾಡು: ಭೂಕುಸಿತದಿಂದ ಸಂತ್ರಸ್ತರ ಪುನರ್ವಸತಿಯಲ್ಲಿ ಫಲಾನುಭವಿಗಳನ್ನು ನಿರ್ಧರಿಸುವ ಮಾನದಂಡವನ್ನು ಸ್ಪಷ್ಟಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಸುರಕ್ಷಿತ
ಜಾಗದಲ್ಲಿ ಬೇರೆ ಮನೆ ಇದ್ದರೆ ಪುನರ್ವಸತಿಗೆ ಅರ್ಹತೆ ಇರುವುದಿಲ್ಲ ಆದರೆ ಮನೆ ಹಾನಿಗೊಳಗಾಗಿದ್ದು, ಬೇರೆ ಮನೆ ಇಲ್ಲದಿದ್ದರೆ ನಾಲ್ಕು ಲಕ್ಷ ರೂಪಾಯಿ ಪರಿಹಾರ ಲಭಿಸಲಿದೆ.
ದುರಂತದ ಪ್ರದೇಶದಲ್ಲಿ ಮನೆ ಬಾಡಿಗೆಗೆ ಇದ್ದವರಾಗಿದ್ದರೆ, ಬಾಡಿಗೆದಾರರು ಹೊಸ ಮನೆಗೆ ಅರ್ಹರಾಗಿರುತ್ತಾರೆ.
ಲೈಫ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಮನೆಗಳು ಹಾನಿಗೊಳಗಾಗಿದ್ದರೆ ಅಥವಾ ನಿಷೇಧಿತ ವಲಯದಲ್ಲಿದ್ದರೆ, ಹೊಸ ಮನೆಯನ್ನು ಮಂಜೂರು ಮಾಡಲಾಗುವುದು.
ಸುರಕ್ಷಿತ ವಲಯಗಳಲ್ಲಿನ ನಿವಾಸಿಗಳು ಮತ್ತು ಭಾಗಶಃ ನಾಶವಾದ ಮನೆಗಳು ಪುನರ್ವಸತಿಗೆ ಅರ್ಹರಲ್ಲ.
ವಯನಾಡ್ ಭೂಕುಸಿತ: ಫಲಾನುಭವಿಗಳನ್ನು ನಿರ್ಧರಿಸಲು ಮಾನದಂಡ ಬಿಡುಗಡೆ
0
ಫೆಬ್ರವರಿ 05, 2025
Tags