ಉಪ್ಪಳ: ಉಪ್ಪಳ ಮೀನು ಮಾರುಕಟ್ಟೆ ಸಮೀಪದ ಕಟ್ಟಡವೊಂದರ ವಾಚ್ ಮೆನ್ ನನ್ನು ಕೊಲೆಗ್ಯೆದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸ್ ಇನ್ಸ್ ಪೆಕ್ಟರ್ ಇ. ಅನೂಪ್ ಕುಮಾರ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಆರೋಪಿ ಸವಾದ್‌ನ ಉಪ್ಪಳ,ಪತ್ವಾಡಿಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದರೆ ಮನೆಗೆ ಬಂದಿಲ್ಲ ಎಂದು ಮನೆಯಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಚ್ಚಿ ಬೀಳಿಸಿದ ಕೊಲೆ ಮಂಗಳವಾರ ರಾತ್ರಿ ಹತ್ತು ಗಂಟೆಗೆ ನಡೆದಿದೆ. ಪಯ್ಯನ್ನೂರು ಮೂಲದ ಸುರೇಶ್ (48) ಕೊಲೆಯಾದವರು. ಕೊಲೆಯ ನಂತರ ತಲೆಮರೆಸಿಕೊಂಡಿರುವ ಸವಾದ್ ಮತ್ತು ಮೃತ ಸುರೇಶ್ ಆಗಾಗ ಜೊತೆ ಜೊತೆಗೆ ಕಂಡುಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಇಬ್ಬರೂ ಡ್ರಗ್ಸ್ ಸೇವಿಸಿರುವ ಶಂಕೆ ವ್ಯಕ್ತವಾಗಿದ್ದು, ಮಾತಿನ ಚಕಮಕಿಯಲ್ಲಿ ಸುರೇಶ್ ಹೊಟ್ಟೆಗೆ ಸವದ್ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಸುರೇಶ್ ನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗತ್ತು. ಬಳಿಕ ಸವಾದ್ ಹೊಟ್ಟೆಗೆ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯರು ಸುರೇಶನನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ನಂತರ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಹತ್ಯೆಯ ನಂತರ ಸವಾದ್ಎಲ್ಲಿಗೆ ನಾಪತಗತೆಯಾಗಿರುವ ಎಂಬುದು ಸ್ಪಷ್ಟವಾಗಿಲ್ಲ.
ಸವಾದ್ ವಿರುದ್ಧ ಮೂರು ಪ್ರಕರಣಗಳು ಬಾಕಿ ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ಪ್ರಕರಣಗಳು ಗಾಂಜಾ ಸೇದಿದ್ದಕ್ಕಾಗಿ ಮತ್ತು ಇನ್ನೊಂದು ಪಾರ್ಕಿಂಗ್ ಮಾಡಿದ ಆಂಬ್ಯುಲೆನ್ಸ್ ಅನ್ನು ಕದ್ದಿದ್ದಕ್ಕಾಗಿ ಎಂದು ಅವರು ಹೇಳಿದರು. ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸವಾದ್ ಸಿಕ್ಕರೆ ಮಾತ್ರ ಕೊಲೆಗೆ ಕಾರಣ ಸ್ಪಷ್ಟವಾಗಲಿದೆ.