ಕಾಸರಗೋಡು: ಪಳ್ಳತ್ತಡ್ಕ ಸನಿಹದ ಚೊಟ್ಟೆತ್ತಡ್ಕ ನಿವಾಸಿ, ಗೋವಾದಲ್ಲಿ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಚಂದ್ರನ್(45)ಅವರ ಮೃತದೇಹ ಚಟ್ಟಂಚಾಲಿನ ಮಂಡಲಿಪ್ಪಾರದ ಅವರ ಪತ್ನಿ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ನಿ ಪ್ರಸನ್ನ ಹಾಗೂ ಚಂದ್ರನ್ ಮಂಡಲಿಪ್ಪಾರದ ಹೊಸ ಮನೆಯಲ್ಲಿ ಕಳೆದ ಐದು ವರ್ಷಗಳಿಂದ ವಾಸಿಸುತ್ತಿದ್ದರು. ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.