ಕುಂಬಳೆ: ತಾಯಿಯೊಂದಿಗೆ ಜಗಳವಾಡುವುದನ್ನು ಪ್ರಶ್ನಿಸಿದ ಸಹೋದರನನ್ನು ಕತ್ತರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸ್ ಠಾಣೆ ವ್ಯಾಫ್ತಿಯ ಕಿದೂರು ನಿವಾಸಿ ಜೋಸೆಫ್(31)ಎಂಬಾಥನನ್ನು ಪೊಲೀಸರು ಬಂಧಿಸಿದ್ದಾರೆ. ಸಹೋದರ ಜೋಯ್‍ಕಿಶೋ ಅವರ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ.
ಕೆಲಸ ಬಿಟ್ಟು ಮನೆಗೆ ಆಗಮಿಸಿದಾಗ ಸಹೋದರ ಜೋಸೆಫ್ ತಾಯಿಯೊಂದಿಗೆ ಜಗಳವಾಡುತ್ತಿದ್ದುದನ್ನು ಪ್ರಶ್ನಿಸಿದಾಗ ತನ್ನಮೇಲೆ ಕೈಯಿಂದ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ತಡೆಯಲೆತ್ನಿಸಿದಾಗ ಕತ್ತರಿಯಿಂದ ಇರಿಯಲು ಯತ್ನಿಸಿರುವುದಾಗಿ ದಊರಿನಲ್ಲಿ ತಿಳಿಸಿದ್ದಾರೆ.