ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಬುಡಕಟ್ಟು ಕುಟುಂಬದ ದಂಪತಿಗಳು ದಾರುಣರಾಗಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಬೆಳಕಿಗೆ ಬಂದಿದೆ.
ಕಣ್ಣೂರು ತಲಶ್ಚೇರಿ ಸಮೀಪದ ಅರಲಂ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಗೆ ಗೇರುಬೀಜ ಸಂಗ್ರಹಿಸುತ್ತಿದ್ದ ಬೆಳ್ಳಿ ಮತ್ತು ಅವರ ಪತ್ನಿ ಲೀಲ ದಂಪತಿಗಳು ಬಲಿಯಾಗಿದ್ದಾರೆ. ಘಟನೆ ಭಾನುವಾರ ಸಂಜೆ ಬ್ಲಾಕ್ 13 ರ ಕರಿಕಮುಕ್ಕುವಿನಲ್ಲಿ ಘಟನೆ ನಡೆದಿದೆ. ಆರ್‍ಆರ್‍ಟಿ ತಂಡವು ಆ ಪ್ರದೇಶವನ್ನು ತಲುಪಿದೆ. ದಾರುಣರಾಗಿ ಮೃತರಾದ ದಂಪತಿಗಳ ಶವಗಳ ಬಳಿ ಆನೆ ನಿಂತಿದ್ದರಿಂದ ಶವವನ್ನು ಆ ಪ್ರದೇಶದಿಂದ ಹೊರತೆಗೆಯಲು ಬಹಳಷ್ಟು ಹೊತ್ತು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.
ಅರಲಂ ಬುಡಕಟ್ಟು ಪುನರ್ವಸತಿ ಪ್ರದೇಶದಲ್ಲಿ ಕಾಡಾನೆಗಳು ನಿಬಿಡವಾಗಿವೆ. ಸೋಲಾರ್ ಬೇಲಿ ನಿರ್ಮಾಣ ಪೂರ್ಣಗೊಳಿಸಬೇಕೆಂಬ ಬೇಡಿಕೆ ಬಲವಾಗಿದ್ದರೂ,2018 ರಲ್ಲಿ ಸರ್ಕಾರದ ಅನುಮತಿ ದೊರೆತಿತ್ತು. ಆದರೆ ಬೇಲಿ ನಿರ್ಮಾಣವಾಗಿಲ್ಲ. ಪರಿಸ್ಥಿತಿ ವಿರುದ್ಧ ಆ ಪ್ರದೇಶದಲ್ಲಿ ತೀವ್ರ ಪ್ರತಿಭಟನೆಯೂ ನಡೆಯುತ್ತಿದೆ.
ಕಣ್ಣೂರು ಅರಲಂ ಅರಣ್ಯ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಲ್ಲಿ 20 ಮಂದಿ ಬಲಿಯಾಗಿದ್ದಾರೆ ಎಂದು ಅಂಕಿಅಂಶಗಳು ಸೂಚಿಸಿವೆ.