ಇಂಫಾಲ: ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿರುವ ಮಾಜಿ ಶಾಸಕ ಬಿಜೋಯ್ ಕೊಯಿಜಮ್ ಅವರ ನಿವಾಸದ ಬಳಿ ಬುಧವಾರ ಬೆಳಿಗ್ಗೆ ಅಪರಿಚಿತ ದುಷ್ಕರ್ಮಿಗಳು ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯ ಗೇಟ್ ಬಳಿ ಬಿದ್ದಿರುವ ಒಂದು ಗ್ರೆನೇಡ್ ಕುಟುಂಬ ಸದಸ್ಯರ ಕಣ್ಣಿಗೆ ಬಿದ್ದಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳದಲ್ಲಿ ಹುಡುಕಾಟ ನಡೆಸಿದಾಗ, ಪೊಲೀಸರಿಗೆ ಇನ್ನೊಂದು ಗ್ರೆನೇಡ್ ಸಿಕ್ಕಿದೆ.
ನಂತರ ಗ್ರೆನೇಡ್‌ಗಳನ್ನು ಲ್ಯಾಂಗೊದಲ್ಲಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಸ್ಫೋಟಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.