ಪ್ರತಿಯೊಬ್ಬ ಭಾರತೀಯ ನಾಗರಿಕನಿಗೂ ಅಗತ್ಯವಾಗಿರುವ ದಾಖಲೆ ಆಧಾರ್ ಕಾರ್ಡ್ (Aadhaar Card). ಸರ್ಕಾರದ ಯಾವುದೇ ಯೋಜನೆ ಪ್ರಯೋಜನ ಪಡೆದುಕೊಳ್ಳಲು ಹಾಗೂ ಇತರ ಕೆಲಸಕ್ಕಾಗಿ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card update) ಮಾಡಿಕೊಳ್ಳುವುದು ಕಡ್ಡಾಯವಾಗಿದೆ.ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಆನ್‌ಲೈನ್ ಮೂಲಕ ಸುಲಭವಾಗಿ ನವೀಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೇರ ಲಿಂಕ್ ಒದಗಿಸಿದೆ.
ಈ ಲಿಂಕ್‌ದ ಮೂಲಕ ಆಧಾರ್ ಹೊಂದಿರುವ ಬಳಕೆದಾರರು ತಮ್ಮ ವಿಳಾಸವನ್ನು ಬದಲಾಯಿಸಬಹುದು. SSUP ಪೋರ್ಟಲ್ ಮೂಲಕ ವಿಳಾಸವನ್ನು ನವೀಕರಿಸಲು ಮತ್ತು KYC ದಾಖಲೆಗಳನ್ನು ಅಪ್‌ಡೇಟ್ ಮಾಡಲು ಕೆಲವೇ ನಿಮಿಷಗಳು ಸಾಕಾಗುತ್ತದೆ. ಹೊಸ ಮನೆ ಖರೀದಿಸಿದ್ದೀರಾ ಅಥವಾ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದೀರಾ? ಆಧಾರ್ ಕಾರ್ಡ್‌ನಲ್ಲಿ ಇನ್ನೂ ಹಳೆಯ ವಿಳಾಸವಿದೆಯಾ? ಹಾಗಿದ್ರೆ, ಇದನ್ನು ಸುಲಭವಾಗಿ ನವೀಕರಿಸುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಈ ಲೇಖನವನ್ನು ಪೂರ್ಣವಾಗಿ ಓದಿ,
ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ವಿಳಾಸವನ್ನು ಬದಲಾಯಿಸುವ ಹಂತಗಳಿವೆ:
ಹಂತ 1: SSUP ಪೋರ್ಟಲ್ ಗೆ ಭೇಟಿ ನೀಡಿ ಮತ್ತು ಲಾಗಿನ್ ಮಾಡಿ.
ಹಂತ 2: "ವಿಳಾಸ ನವೀಕರಣ" ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 3: "ಆಧಾರ್ ಆನ್‌ಲೈನ್‌ನಲ್ಲಿ ನವೀಕರಿಸಿ" ಆಯ್ಕೆ ಮಾಡಿ, ಸೂಚನೆಗಳನ್ನು ಓದಿ, "ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ.
ಹಂತ 4: ಹೊಸ ವಿಳಾಸವನ್ನು ಎಚ್ಚರಿಕೆಯಿಂದ ನಮೂದಿಸಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 5: ₹50 ನಾಮಮಾತ್ರ ಶುಲ್ಕವನ್ನು ಪಾವತಿಸಿ.
ಹಂತ 6: ಪಾವತಿ ನಂತರ, ಸೇವಾ ವಿನಂತಿ ಸಂಖ್ಯೆ (SRN) ಪಡೆಯಿರಿ ಮತ್ತು ನವೀಕರಣ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
ಈ ಸರಳ ಹಂತಗಳ ಮೂಲಕ ನಿಮ್ಮ ಆಧಾರ್ ವಿಳಾಸವನ್ನು ಸುಲಭವಾಗಿ ನವೀಕರಿಸಬಹುದು
ಆಧಾರ್ ಕಾರ್ಡ್ ವಿಳಾಸ ಬದಲಾವಣೆಗೆ ಮಾನ್ಯ ದಾಖಲೆಗಳ ಪಟ್ಟಿ
ಪಾಸ್ಪೋರ್ಟ್,ಬ್ಯಾಂಕ್ ಸ್ಟೇಟ್‌ಮೆಂಟ್/ಪಾಸ್‌ಬುಕ್,ಚಾಲನಾ ಪರವಾನಿಗೆ,ಪಿಂಚಣಿದಾರರ ಕಾರ್ಡ್,ವಿಮಾ ಪಾಲಿಸಿ,ವಿಳಾಸ ದೃಢೀಕರಣ ಪತ್ರ,ಆಸ್ತಿ ತೆರಿಗೆ ರಶೀದಿ