ನವದೆಹಲಿ: ಚುನಾವಣಾ ಆಯೋಗದ ಕಾರ್ಯವಿಧಾನವನ್ನು ಪರಾಮರ್ಶಿಸಲು 'ನಾಯಕರ ಹಾಗೂ ತಜ್ಞರ ಪರಮಾಧಿಕಾರ ಕಾರ್ಯಪಡೆ'ಯೊಂದನ್ನು (ಎಂಪವರ್ಡ್ ಆಯಕ್ಷನ್ ಗ್ರೂಪ್ ಆಫ್ ಲೀಡರ್ಸ್ ಆಯಂಡ್ ಎಕ್ಸ್‌ಪರ್ಟ್ಸ್-ಈಗಲ್) ಕಾಂಗ್ರೆಸ್ ಭಾನುವಾರ ರಚಿಸಿದೆ.
ಅಜಯ್ ಮಾಕನ್, ದಿಗ್ವಿಜಯ ಸಿಂಗ್, ಅಭಿಶೇಕ್‌ಮನು ಸಿಂಘ್ವಿ, ಪ್ರವೀಣ್ ಚಕ್ರವರ್ತಿ, ಪವನ್ ಖೇರಾ, ಗುರ್ದೀಪ್ ಸಿಂಗ್ ಸಪ್ಪಾಲ್, ನಿತಿನ್ ರಾವುತ್ ಮತ್ತು ಚಲ್ಲಾ ವಂಶಿ ಚಂದ್ ರೆಡ್ಡಿ- ಈ ಪಡೆಯ ಸದಸ್ಯರು.
ಈ ಪಡೆಯು ತಕ್ಷಣದಿಂದಲೇ ಕಾರ್ಯಾರಂಭ ಆಗುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಕುರಿತು ಈ ಪಡೆಯು ಆದಷ್ಟು ಬೇಗ ವರದಿ ನೀಡಲಿದೆ. ದೆಹಲಿ ವಿಧಾನಸಭೆ ಚುನಾವಣೆ ಸೇರಿ ಮುಂಬರುವ ಎಲ್ಲ ಚುನಾವಣೆಗಳ ವೇಳೆ ಆಯೋಗದ ಕಾರ್ಯವಿಧಾನವನ್ನು ಈ ಪಡೆ ಪರಾಮರ್ಶಿಸಲಿದೆ.