ಕೊಟ್ಟಾಯಂ: ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರೊಬ್ಬರು ತಮ್ಮ ವಿವಾದಾತ್ಮಕ ಹೇಳಿಕೆಗಳ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಪಿಸಿ ಜಾರ್ಜ್ ಅವರನ್ನು ಎರಟ್ಟುಪೆಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ಕಾಲ ರಿಮಾಂಡ್ ಮಾಡಿದೆ.
ಹೈಕೋರ್ಟ್ ಜಾರ್ಜ್ ಅವರಿಗೆ ಜಾಮೀನು ನಿರಾಕರಿಸಿದ ನಂತರ ಪೋಲೀಸರು ಹಾಜರಾಗುವಂತೆ ನೋಟಿಸ್ ನೀಡಿದ್ದರು. ಹಾಜರಾಗಲು ಹೇಳಲಾಗಿದ್ದರೂ, ಸೋಮವಾರ ಪೂಂಜಾರ್‍ನಲ್ಲಿರುವ ಅವರ ಮನೆಗೆ ಪೋಲೀಸರ ದೊಡ್ಡ ಗುಂಪು ಆಗಮಿಸಿತು. ಇದರ ನಂತರ, ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶರಣಾದರು. ಜಾರ್ಜ್ ಅವರನ್ನು ಸಂಜೆಯವರೆಗೆ ಪೋಲೀಸ್ ಕಸ್ಟಡಿಗೆ ವಹಿಸಿ, ನಂತರ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಜನವರಿ 5 ರಂದು ಚಾನೆಲ್ ಚರ್ಚೆಯಲ್ಲಿ ಭಾಗವಹಿಸಿದ್ದ ಸಂದರ್ಭ ಜಾರ್ಜ್ ಮಾಡಿದ ಹೇಳಿಕೆಗಳಿಂದ ಈ ಪ್ರಕರಣ ಹುಟ್ಟಿಕೊಂಡಿತು.
ತರುವಾಯ, ಎರಟ್ಟುಪೆಟ್ಟಾ ಮೂಲದ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತ ಮುಹಮ್ಮದ್ ಶಿಹಾಬ್ ಜಾರ್ಜ್ ವಿರುದ್ಧ ಪೋಲೀಸ್ ದೂರು ದಾಖಲಿಸಿದ್ದರು.