ತಿರುವನಂತಪುರಂ: ಪಾರಶಾಲದ ಶರೋನ್ ಕೊಲೆ ಪ್ರಕರಣದಲ್ಲಿ ನೆಯ್ಯಟ್ಟಿಂಗರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಿಧಿಸಿರುವ ಮರಣದಂಡನೆಯನ್ನು ರದ್ದುಗೊಳಿಸುವಂತೆ ಕೋರಿ ಮೊದಲ ಆರೋಪಿ ಗ್ರೀಷ್ಮಾ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾಳೆ. ಈ ಮೇಲ್ಮನವಿಯನ್ನು ಹೈಕೋರ್ಟ್ ಸ್ವೀಕರಿಸಿದೆ.
ವಿಭಾಗೀಯ ಪೀಠವು ಎದುರಾಳಿ ಪಕ್ಷಗಳಿಗೆ ನೋಟಿಸ್ ಕಳುಹಿಸಿದೆ. ಗ್ರೀಷ್ಮಾ ಪ್ರಸ್ತುತ ತಿರುವನಂತಪುರದ ಅಟ್ಟಕ್ಕುಳಂಗರ ಜೈಲಿನಲ್ಲಿದ್ದಾಳೆ. ಏತನ್ಮಧ್ಯೆ, ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎರಡನೇ ಆರೋಪಿ ಮತ್ತು ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಾ ಕುಮಾರನ್ ನಾಯರ್‍ಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಜಾಮೀನನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಜನವರಿ 20 ರಂದು ನೆಯ್ಯಟ್ಟಿಂಗರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಗ್ರೀಷ್ಮಾಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದು ಬಹಳ ಚಾಣಾಕ್ಷತನದಿಂದ ನಡೆಸಲಾದ ಕೊಲೆಯಾಗಿದ್ದು, ಕೊಲೆಯ ಹಿಂದೆ ಯಾವುದೇ ಪ್ರಚೋದನೆ ಇಲ್ಲ ಎಂದು ನ್ಯಾಯಾಲಯ ಹೇಳಿತ್ತು.