ತಿರುವನಂತಪುರಂ; "ಅವನು ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುವ ಒಳ್ಳೆಯ ಯುವಕ. ನನಗೆ ಅವನು ಚಿಕ್ಕಂದಿನಿಂದಲೂ ಗೊತ್ತು. ಅವನು ಯಾವಾಗಲೂ ಮಸೀದಿಗೆ ತೆರಳಿ ಪ್ರಾರ್ಥನೆ ಮತ್ತು ಉಪವಾಸ ಮಾಡುತ್ತಿದ್ದ ಒಳ್ಳೆಯ ಯುವಕ" ಎಂದು ಸರಣಿ ಹಂತಕನಾದ ಪೆರುಮಾಳದ ಮೂಲದ ಅಫಾನ್ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆಯೊಬ್ಬರ ಮಾತುಗಳಿವು, ಅವನ ಅಜ್ಜಿ ಮತ್ತು ತಮ್ಮ ಸೇರಿದಂತೆ 5 ಜನರನ್ನು ಕೊಂದು ಪೋಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಶರಣಾಗಿ ಚಕಿತಗೊಳಿಸಿದ ಯುವಕ ಆತ.
ಅವನು ಯಾವಾಗಲೂ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಮತ್ತು ಚೆನ್ನಾಗಿ ಬೆರೆಯುವ ಮಗುವಾಗಿದ್ದನೆಂದು ಸ್ಥಳೀಯರು ಹೇಳುತ್ತಾರೆ.
ತಂದೆಯೊಂದಿಗೆ ವಿದೇಶದಲ್ಲಿದ್ದ ಅಫಾನ್ ಇತ್ತೀಚೆಗೆ ಮನೆಗೆ ಮರಳಿದ್ದನು. ಅವನು ಕೊಂದ ಮೊದಲ ವ್ಯಕ್ತಿ ಅವನ ತಂದೆಯ ತಾಯಿ ಸಲ್ಮಾ ಬೀವಿ (88), ಅವರ ತಲೆಗೆ ಹೊಡೆದು ಕೊಲೆಗೈಯ್ಯಲಾಗಿತ್ತು. ನಂತರ, ಅವನು ಪುಲ್ಲಂಬರ ಅಲಮುಕ್ ತಲುಪಿ ತನ್ನ ತಂದೆಯ ಸಹೋದರ ಲತೀಫ್ ಮತ್ತು ಅವನ ಪತ್ನಿ ಶಾಹಿದಾಳನ್ನು ಕಡಿದು ಕೊಂದನು.
ನಂತರ, ಪೆರುಮಲೈನಲ್ಲಿರುವ ತನ್ನ ಮನೆಗೆ ತೆರಳಿ ತನ್ನ ತಾಯಿ ಶಮೀನಾ, 3 ದಿನಗಳಿಂದ ಮನೆಯಲ್ಲಿದ್ದ ಗೆಳತಿಯಾದ ಬಾಲಕಿ ಫರ್ಶಾನಾ ಮತ್ತು ಸ್ವಂತ ಸಹೋದರ ಅಫ್ಸಾನ್ (13) ಮೇಲೆ ಹಲ್ಲೆ ನಡೆಸಿ ಕೊಲೆಗೈದಿದ್ದ. ಆತನ ತಾಯಿ ಕ್ಯಾನ್ಸರ್ ರೋಗಿ ಶಮೀನಾ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇರಿತಕ್ಕೊಳಗಾದ ಸಹೋದರ ಮತ್ತು ಹುಡುಗಿ ಸಾವನ್ನಪ್ಪಿದರು. ಕೊಲೆಯ ನಂತರ, ಆರೋಪಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ತೆರೆದಿರಿಸಿ ನಂತರ ಪೋಲೀಸ್ ಠಾಣೆಗೆ ತೆರಳಿ ಶರಣಾಗಿದ್ದ.