ರೋಮ್: ನ್ಯುಮೋನಿಯಾ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಪೋಪ್ ಫ್ರಾನ್ಸಿಸ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವ್ಯಾಟಿಕನ್ ಹೇಳಿದೆ.
'ಪೋಪ್ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡುಬಂದಿದೆ. ರಾತ್ರಿಯಿಡೀ ಆವರ ಆರೋಗ್ಯ ಸ್ಥಿರವಾಗಿತ್ತು.
ಬೆಳಿಗ್ಗೆ ಉಪಾಹಾರ ಸೇವಿಸಿದರು' ಎಂದು ಶುಕ್ರವಾರ ಬೆಳಿಗ್ಗೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಪೋಪ್ ಅವರನ್ನು ಫೆ.14ರಂದು ರೋಮ್‌ನ ಜೆಮೆಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅನಾರೋಗ್ಯದಿಂದ ಸಂಪೂರ್ಣ ಚೇತರಿಸಿಕೊಳ್ಳಲು ಸಾಧ್ಯವಾಗದಿದ್ದರೆ ಫಾನ್ಸಿಸ್ ಅವರು ಪೋಪ್ ಹುದ್ದೆಗೆ ರಾಜೀನಾಮೆ ನೀಡಬಹುದು ಎಂಬ ಮಾತುಗಳೂ ಈ ನಡುವೆ ಕೇಳಿಬಂದಿವೆ. ರಾಜೀನಾಮೆ ಕುರಿತ ಪ್ರಶ್ನೆಗೆ ಫ್ರಾನ್ಸ್‌ನ ಮಾರ್ಸೇಯ್‌ನ ಆರ್ಚ್‌ಬಿಷಪ್ ಆಗಿರುವ ಕಾರ್ಡಿನಲ್ ಜೀನ್ ಮಾರ್ಕ್ ಆವೆಲಿನ್ ಅವರು 'ಎಲ್ಲವೂ ಸಾಧ್ಯ' ಎಂದು ಪ್ರತಿಕ್ರಿಯಿಸಿದ್ದಾರೆ.