ಬಿಜಾಪುರ್: ಛತ್ತೀಸಗಢದ ಬಿಜಾಪುರ್‌ನಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ 31 ಮಂದಿ ನಕ್ಸಲೀಯರಲ್ಲಿ ಹುಂಗಾ ಕರ್ಮಾ ಕೂಡ ಸೇರಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತನ ಬಗ್ಗೆ ಮಾಹಿತಿ ನೀಡಿದವರಿಗೆ ₹8 ಲಕ್ಷದ ಬಹುಮಾನ ಕೂಡ ಘೋಷಣೆ ಆಗಿತ್ತು.
ಜನವರಿ 6ರಂದು ಇಂದ್ರಾವತಿ ರಾಷ್ಟ್ರೀಯ ಉದ್ಯಾನದಲ್ಲಿ ನಡೆದ ಕಚ್ಚಾ ಬಾಂಬ್ ಸ್ಫೋಟ (ಐಇಡಿ) ಪ್ರಕರಣದಲ್ಲಿ ಈತ ಪ್ರಮುಖ ಸಂಚುಕೋರ ಆಗಿದ್ದ. ಕಚ್ಚಾ ಬಾಂಬ್ ಸ್ಫೋಟದಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದರು.
ನಕ್ಸಲೀಯರು 60ರಿಂದ 70 ಕೆ.ಜಿ.ಯಷ್ಟು ಸ್ಫೋಟಕ ಬಳಸಿ ಭದ್ರತಾ ಸಿಬ್ಬಂದಿಯ ವಾಹನವನ್ನು ಸ್ಫೋಟಿಸಿದ್ದರು. ವಾಹನದ ಚಾಲಕ ಕೂಡ ಸ್ಫೋಟಕ್ಕೆ ಬಲಿಯಾಗಿದ್ದ.