ಗಾಜಿಯಾಬಾದ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದ ವೈದ್ಯರಾದ ವಿಪಿನ್ ಚಂದ್ರ ಉಪಾಧ್ಯಾಯ ಹೇಳುವಂತೆ ನವಜಾತ ಶಿಶುಗಳಲ್ಲಿ ಕಾಮಾಲೆ ಬರಲು ಹಲವು ಕಾರಣಗಳಿವೆ. ಗರ್ಭದಲ್ಲಿರುವ ಮಗು ಸಂಪೂರ್ಣವಾಗಿ ಬೆಳವಣಿಗೆಯಾಗುವುದಿಲ್ಲ. ಗರ್ಭಿಣಿಯರು ಸರಿಯಾದ ಪೌಷ್ಟಿಕ ಆಹಾರವನ್ನು ಸೇವಿಸುವುದಿಲ್ಲ. ಇಂತಹ ಹಲವು ಲಕ್ಷಣಗಳು ಇರಬಹುದು. ಜನನದ ನಂತರ, ಮಗುವಿನ ಯಕೃತ್ತು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದಾಗಿ ದೇಹದಲ್ಲಿ ಬಿಲಿರುಬಿನ್ ಸಂಗ್ರಹವಾಗುತ್ತದೆ, ನವಜಾತ ಶಿಶುವಿನಲ್ಲಿ ಕಾಮಾಲೆ ಉಂಟಾಗುತ್ತದೆ.
ಈ ಸಮಯದಲ್ಲಿ ನವಜಾತ ಶಿಶುಗಳಲ್ಲಿ, ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ ಹಾಗೂ ಆ ರಕ್ತದ ಹೆಪ್ಪು ಹೊಡೆಯುವುತ್ತದೆ. ಇದರಿಂದಾಗಿ ಬಿಲಿರುಬಿನ್ ಹೆಚ್ಚಾಗುತ್ತದೆ. ನವಜಾತ ಶಿಶುವಿನಲ್ಲಿ ಬಿಲಿರುಬಿನ್ ಹೆಚ್ಚಾದರೆ, ಕಾಮಾಲೆ ಬರುವ ಅಪಾಯ ಹೆಚ್ಚಾಗುತ್ತದೆ.ಯಾವುದೇ ರೋಗವು ದೇಹಕ್ಕೆ ಅಪಾಯಕಾರಿ, ಆದರೆ ಕಾಮಾಲೆ 1-2 ವಾರಗಳಲ್ಲಿ ತಾನಾಗಿಯೇ ಗುಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಇದು ಗಂಭೀರತೆಯನ್ನು ಉಂಟು ಮಾಡಬಹುದು. ಮಗುವಿಗೆ ಆಗಾಗ್ಗೆ ಹಾಲುಣಿಸುವುದರಿಂದ ಕಾಮಾಲೆ ಬೇಗನೆ ಗುಣವಾಗುತ್ತದೆ. ನಿಮ್ಮ ಮಗುವಿಗೆ ಕಾಮಾಲೆಯ ಲಕ್ಷಣಗಳು (ಚರ್ಮ ಅಥವಾ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು) ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ, ಯಾವುದೇ ರೀತಿಯ ಸಂದೇಹಗಳಿದ್ದಲ್ಲಿ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸುವುದು ಸೂಕ್ತ.