ಇಂಫಾಲ್: ಕೆಲವು ಗ್ರಾಮ ಸ್ವಯಂಸೇವಕರ ಬಂಧನ ಖಂಡಿಸಿ, ಭದ್ರತಾ ಪಡೆಗಳಿಗೆ ಬೆದರಿಕೆ ಹಾಕುವ ವಿಡಿಯೊ ಮಾಡಿದ್ದಕ್ಕಾಗಿ ನಿಷೇಧಿತ ಕಂಗ್ಲಿಪಾಕ್ ಕಮ್ಯುನಿಸ್ಟ್ ಪಕ್ಷದ (ಸಿಟಿ ಮೈತೇಯಿ) ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಬಿಷ್ಣುಪುರ ಜಿಲ್ಲೆಯ ಥಮ್ನಾಪೋಕ್ಪಿಯ ಮೊಯಿರಾಂಗ್ತೇಮ್ ಥೋಯಿಬಾ (36) ಹಾಗೂ ಇಂಫಾಲ್ ಪೂರ್ವ ಜಿಲ್ಲೆಯ ಸೈಖೋಮ್ ಲೆಂಬುರ್ಸ್ ಸಿಂಗ್ ಎಂಬುವರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ತಂಡವು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್‌ನ (ಕೆ) ಇಬ್ಬರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ವಾಂಗ್ಖೆಮ್ ರೋಹಿತ್ ಸಿಂಗ್ (18) ಹಾಗೂ ಥಂಗ್ಜಾಮ್‌ನ ನೊಂಗನ್ ಮೈತೇಯಿ (18) ಬಂಧಿತರು. ಇವರು ಅಂಗಡಿಗಳು ಹಾಗೂ ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.