ಅದರಲ್ಲೂ ಅಡುಗೆ ಮನೆ ವಸ್ತುವಾಗಿರುವ ಸ್ಟೀಲ್ ಪಾತ್ರೆ ಖರೀದಿಸುವಾಗಲಂತು ವಿವಿಧ ರೀತಿಯಲ್ಲಿ ಅದನ್ನು ಪರೀಕ್ಷಿಸಿದ ಬಳಿಕವೇ ಖರೀದಿಸುತ್ತಾರೆ. ಕೆಲವೊಮ್ಮೆ ಕಡಿಮೆ ಬೆಲೆ ಅತ್ಯುತ್ತಮ ಉತ್ಪನ್ನ ನಿಮ್ಮ ಕೈ ಸೇರಬಹುದು. ಹಾಗೆ ಕೆಲವೊಮ್ಮೆ ಹೆಚ್ಚು ಬೆಲೆ ನೀಡಿದ್ರೂ ಕೂಡ ಕಳಪೆ ವಸ್ತು ಮನೆ ಸೇರಬಹುದು. ಹೀಗಾಗಿ ನಾವಿಂದು ಈ ಸ್ಟೀಲ್ ಪಾತ್ರೆ ಖರೀದಿಗೂ ಮುನ್ನ ಮಹಿಳೆಯರು ಗಮನಿಸಬೇಕಾದ ಕೆಲವೊಂದು ವಿಚಾರಗಳ ಕುರಿತು ತಿಳಿದುಕೊಳ್ಳೋಣ.
ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳನ್ನು ಖರೀದಿಸುವುದು ಬಹಳ ಕಾಲ ಬಾಳಿಕೆ ಬರುತ್ತದೆ ಎಂದು. ಹಾಗೆ ಮಾರುಕಟ್ಟೆಯಲ್ಲಿ ನೂರಾರು ಕಂಪನಿಗಳ ಒಂದೇ ರೀತಿಯ ಪಾತ್ರೆಗಳನ್ನು ನಾವು ನೋಡಬಹುದು. ಆದ್ರೆ ಯಾವುದನ್ನು ಖರೀದಿಸಬೇಕು. ಕಡಿಮೆ ಬೆಲೆಯದ್ದು ಖರೀದಿಸಬೇಕೆ ಅಥವಾ ದುಬಾರಿ ಬೆಲೆಯದ್ದು ಖರೀದಿಸಬೇಕು? ಎಂಬುದು ಗೊಂದಲಕ್ಕೆ ಕಾರಣವಾಗುತ್ತದೆ.
ಹಾಗೆ ಈ ಸ್ಟೈನ್‌ಲೆಸ್ ಸ್ಟೀಲ್ ಖರೀದಿಸುವಾಗ ಈ ಪಾತ್ರೆಯ ಗುಣಮಟ್ಟ, ಅದು ಯಾವ ರೀತಿ ತಳ ಹೊಂದಿದೆ, ದಪ್ಪ ಇದೆಯಾ ಹೀಗೆ ಹತ್ತಾರು ವಿಚಾರಗಳ ಕುರಿತು ಗಮನವಿಡುತ್ತೇವೆ. ಆದ್ರೆ ನಾವು ಈ ಸ್ಟೀಲ್ ಪಾತ್ರೆ ಖರೀದಿಗೂ ಮುನ್ನ ಯಾವೆಲ್ಲಾ ವಿಚಾರಗಳ ಕುರಿತು ಗಮನವಿಡಬೇಕು ಅನ್ನೋದನ್ನು ತಿಳಿದುಕೊಳ್ಳೋಣ.
ಸ್ಟೇನ್‌ಲೆಸ್ ಸ್ಟೀಲ್‌ನ ದರ್ಜೆ ಯಾವುದು ನೋಡಬೇಕು;
ಸ್ಟೈನ್‌ಲೆಸ್ ಸ್ಟೀಲ್ ಖರೀದಿಗೂ ಮುನ್ನ ಅದು ಯಾವ ಗ್ರೇಡ್‌ನ ಸ್ಟೀಲ್ ಅನ್ನೋದನ್ನು ನೋಡಬೇಕು. ಏಕೆಂದರೆ ಎಲ್ಲಾ ಸ್ಟೀಲ್ ಪಾತ್ರೆಗಳು ಒಂದೇ ರೀತಿಯ ಗ್ರೇಡ್ ಹೊಂದಿರುವುದಿಲ್ಲ. ಕೆಲವೊಂದು ಕರೆಂಟ್ ಒಲೆಯಲ್ಲಿ ಅಡುಗೆ ಮಾಡಲು ಯೋಗ್ಯವಲ್ಲ. ಉತ್ತಮ ಗುಣಮಟ್ಟದ ಸ್ಟೀಲ್ 18/8 ಅಥವಾ 18/10 ಗ್ರೇಡ್ ಪಡೆದಿರುತ್ತವೆ. ಇವು ಹೆಚ್ಚು ಶಾಖ ತಡೆದುಕೊಳ್ಳುತ್ತವೆ. ಹೀಗಾಗಿ ಅಂಗಡಿಯವರ ಬಳಿ ಅಥವಾ ಸ್ಟೀಲ್‌ನ ಮೇಲೆಯೇ ಈ ಗ್ರೇಡ್‌ಗಳ ಕುರಿತು ಮಾಹಿತಿ ಹಾಕಿರಲಾಗುತ್ತದೆ. ಆದ್ರೆ ಕಳಪೆ ಕಳಪೆ ಸ್ಟೀಲ್‌ನಲ್ಲಿ ಈ ಕುರಿತ ಮಾಹಿತಿಯೇ ಇರುವುದಿಲ್ಲ.
ಹ್ಯಾಂಡಲ್ ಹಾಗೂ ಮುಚ್ಚಳ ಬಹಳ ಮುಖ್ಯ: ನೀವು ಖರೀದಿಸಲು ಹೊರಟಿರುವ ಸ್ಟೀಲ್ ಪಾತ್ರೆಯ ಹ್ಯಾಂಡಲ್‌ಗಳು ಹೇಗಿವೆ ಎಂಬುದನ್ನು ಪರಿಶೀಲಿಸುವುದು ಬಹಳ ಮುಖ್ಯ. ಹಾಗೆ ಅವುಗಳ ಮುಚ್ಚಳಗಳು ಕೂಡ ಬಳ ಮುಖ್ಯವಾಗುತ್ತೆ. ಆದ್ರೆ ಹಲವರು ಈ ಕುರಿತು ಹೆಚ್ಚು ಗಮನ ನೀಡುವುದಿಲ್ಲ. ಕೆಲವು ಪಾತ್ರೆಗಳು ಚೆನ್ನಾಗಿರುವ ಮುಖ್ಯ ಭಾಗ ಹೊಂದಿರುತ್ತವೆ ಆದ್ರೆ ಹ್ಯಾಂಡಲ್ ಹಾಗೂ ಮುಚ್ಚಳ ಬಹಳ ಕಳಪೆ ಮಟ್ಟದಲ್ಲಿರುತ್ತವೆ.