ಡೀಪ್‌ಸೀಕ್! ಸದ್ಯ ಜಗತ್ತನ್ನು ಬೆಚ್ಚಿ ಬೀಳಿಸುತ್ತಿರುವ ಪವರ್ಫುಲ್ ಎಐ. ಚೀನಾದ ಈ ಡೇಂಜರಸ್ (DeepSeek) ಎಐ ಹಾವಳಿಗೆ ಸ್ವತಃ ತಜ್ಞರೇ ಬೆಚ್ಚಿ ಬಿದ್ದಿದ್ದಾರೆ. ಹೌದು, ಚೀನಾ ಎಐ ತಂತ್ರಜ್ಞಾನದಲ್ಲಿ ಅಮೆರಿಕಕ್ಕಿಂತ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲ. ಸದ್ಯ ಈ ಎರಡೂ ದೇಶಗಳು ಎಐನಲ್ಲಿ (AI) ವಿಶ್ವದಲ್ಲೇ ಮುಂಚೂಣಿಯಲ್ಲಿವೆ. ಇತರೆ ರಾಷ್ಟ್ರಗಳು ಕೂಡ ಇದರತ್ತ ಗಮನಹರಿಸುತ್ತಿವೆ. ಕಳೆದ ತಿಂಗಳು ಡೀಪ್‌ಸೀಕ್ ಹೊಸ ಎಐ (AI) ಬಿಡುಗಡೆ ಮಾಡಿದೆ. ಈ ಪವರ್ಫುಲ್ ಎಐ ಕಂಡು ತಜ್ಞರು ಸ್ಟನ್ ಆಗಿದ್ದಾರೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಡೀಪ್‌ಸೀಕ್ (DeepSeek) ಬಿಡುಗಡೆಯಾದ ಕೂಡಲೇ ಜಗತ್ತಿನಾದ್ಯಂತ ಭಾರೀ ಸಂಚಲನ ಮೂಡಿದೆ. ಇಷ್ಟು ಕಡಿಮೆ ಹಣದಲ್ಲಿ ಚೀನಾದ ಒಂದು ಸಣ್ಣ ಸ್ಟಾರ್ಟ್ಅಪ್ ಕಂಪನಿ ಶಕ್ತಿಶಾಲಿ ಎಐ ಸೃಷ್ಟಿಸಿದೆ. ಜಗತ್ತಿನಾದ್ಯಂತ ಎಐ ತಜ್ಞರು ಚೀನಾ ಈ ರೀತಿಯ ಕೆಲಸ ಮಾಡುತ್ತೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಇದೀಗ ಈ ಎಐ ಇಡೀ ವಿಶ್ವದ ತಜ್ಞರನ್ನು ಬೆಚ್ಚಿ ಬೀಳಿಸಿದೆ. ಇದು ಜನತೆಯಲ್ಲಿ ಹಲವು ಕುತೂಹಲ ಹುಟ್ಟುಹಾಕಿದೆ. ಬನ್ನಿ, ಡೀಪ್‌ಸೀಕ್ ಎಂದರೇನು? ಅಂತ ತಿಳಿಯೋಣ.
ಚೀನಾದ ಉದ್ಯಮಿ ಲಿಯಾಂಗ್ ವೆನ್‌ಫೆಂಗ್ ಹೈ ಫ್ಲೈಯರ್ ಮತ್ತು ಡೀಪ್‌ಸೀಕ್ ಎರಡನ್ನೂ ಮುನ್ನಡೆಸುತ್ತಿದ್ದಾರೆ. ವಿಶೇಷವೆಂದರೆ, ಚೀನಾದ ನವೋದ್ಯಮಗಳು ಯುವ ಮತ್ತು ಪ್ರತಿಭಾನ್ವಿತ ಎಐ ಸಂಶೋಧಕರನ್ನು ಆಕರ್ಷಿಸುವಲ್ಲಿ ಸೈ ಎನಿಸಿಕೊಂಡಿದೆ. ಹೆಚ್ಚು ವೇತನ ಮತ್ತು ಅತ್ಯಾಧುನಿಕ ಸಂಶೋಧನಾ ಪ್ಲಾನ್‌ಗಳಲ್ಲಿ ಕೆಲಸ ನಿರ್ವಹಿಸುವ ಅವಕಾಶ ನೀಡುತ್ತವೆ. ಅದರಂತೆ ಡೀಪ್‌ಸೀಕ್ ಅನೇಕ ಭಾಷಾ ಮಾದರಿಗಳನ್ನು ಪರಿಚಯಿಸಿದೆ. ಇದು ChatGPT ಮತ್ತು ಜೆಮಿನಿ ಸೇರಿದಂತೆ ಹಲವು ಚಾಟ್‌ಬಾಟ್‌ಗಳ ಆಧಾರ ರೂಪಿಸುವ ತಂತ್ರಜ್ಞಾನವಾಗಿದೆ. ಜ.10 ರಂದು ಮೊದಲ ಉಚಿತ ಚಾಟ್‌ಬಾಟ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.
ಗೂಗಲ್‌ನ ಜೆಮಿನಿ ಮಾದರಿಯಲ್ಲಿ ಎಐ ತಂತ್ರಜ್ಞಾನ
ಡೀಪ್‌ಸೀಕ್ ಚೀನಾದ ಸ್ಟಾರ್ಟ್ಅಪ್ ಕಂಪನಿಯಾಗಿದೆ. ಚೀನಾದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ಹೈ ಫ್ಲೈಯರ್ ಇದನ್ನು ಪ್ರಾರಂಭಿಸಿದೆ. ಸದ್ಯ ಡೀಪ್‌ಸೀಕ್ ಅದರ ಒಡೆತನದಲ್ಲಿದೆ. ಗೂಗಲ್‌ನ ಜೆಮಿನಿ ಅಥವಾ ಓಪನ್‌ಎಐನ ಚಾಟ್‌ಜಿಪಿಟಿ ಚಾಟ್‌ಬಾಟ್ ಮಾದರಿಯಲ್ಲಿ ಎಐ ತಂತ್ರಜ್ಞಾನ ನಿರ್ಮಿಸುವ ಗುರಿ ಹೊಂದಿದೆ. 2021ರಲ್ಲಿ ಅಮೆರಿಕದ ಚಿಪ್‌ಮೇಕರ್ ಎನ್‌ವಿಡಿಯಾದಿಂದ ಅನೇಕ ಕಂಪ್ಯೂಟರ್ ಚಿಪ್‌ಗಳನ್ನು ಡೀಪ್‌ಸೀಕ್ ಪಡೆದುಕೊಂಡಿತು. ಈ ಮೂಲಕ ಪ್ರಬಲ ಎಐ ಸೃಷ್ಟಿಸುವ ಸುಳಿವು ನೀಡಿತು.
ಕಡಿಮೆ ಎಐ ಚಿಪ್ ಬಳಕೆ
ಕಡಿಮೆ ಎಐ ಚಿಪ್ ಬಳಕೆ ಮಾಡಿ ತಂತ್ರಜ್ಞಾನ ನಿರ್ಮಿಸಲಾಗಿದೆ. ಇದರ ಬುದ್ಧಿವಂತ ಮತ್ತು ಪರಿಣಾಮಕಾರಿ ಮಾರ್ಗಗಳನ್ನು ಡೀಪ್‌ಸೀಕ್‌ನ ಸಂಶೋಧನೆ ವಿವರಿಸುತ್ತದೆ. ಇದು ಅಮೆರಿಕದ ಉನ್ನತ ಎಐ ಎಂಜಿನಿಯರ್‌ಗಳ ಅಭಿಪ್ರಾಯವಾಗಿದೆ. ಎಂಜಿನಿಯರ್‌ಗಳು ಕಡಿಮೆ ಚಿಪ್‌ಗಳನ್ನು ಬಳಸಿಕೊಂಡು ಡೇಟಾವನ್ನು ವಿಶ್ಲೇಷಿಸಲು ಒಂದು ಚುರುಕಾದ ಮಾರ್ಗವನ್ನು ಪ್ರದರ್ಶಿಸಿದ್ದಾರೆ. ಈ ಎಐ ವ್ಯವಸ್ಥೆಗಳು ಟೆಕ್ಸ್ಟ್, ಇಮೇಜ್ ಮತ್ತು ವಾಯ್ಸ್ ಸೇರಿದಂತೆ ಡೇಟಾದಲ್ಲಿ ಮಾದರಿಗಳನ್ನು ಗುರುತಿಸುತ್ತವೆ. ಇದನ್ನು ಸಂಶೋಧಕರು ತಜ್ಞರ ಮಿಶ್ರಣ ವಿಧಾನ ಎಂದು ಹೇಳಿದ್ದಾರೆ.
ಓಪನ್ ಎಐ, ಗೂಗಲ್ ಎಐಗಿಂತ ಡೀಪ್‌ಸೀಕ್ ಎಐ ಬೆಸ್ಟ್?
ವರಿದಿಯ ಪ್ರಕಾರ, ಡೀಪ್‌ಸೀಕ್ V3 (DeepSeek-V3) ಪ್ರಶ್ನೆಗಳಿಗೆ ಉತ್ತರಿಸಬಹುದು. ಕಠಿಣ ಸಮಸ್ಯೆಗಳನ್ನು ಪರಿಹರಿಸಬಹುದು. ಡೀಪ್‌ಸೀಕ್ ತನ್ನ ತಂತ್ರಜ್ಞಾನವನ್ನು ಬಿಡುಗಡೆ ಮಾಡುವುದಕ್ಕೂ ಮೊದಲೇ, ಓಪನ್ ಎಐ (OpenAI) ಓಪನ್ ಎಐ O3 ಅನ್ನು ಪರಿಚಯಿಸಿತು. ಇದು ಡೀಪ್‌ಸೀಕ್ V3 (DeepSeek-V3) ಗಿಂತ ಹೆಚ್ಚು ಪವರ್ ಫುಲ್ ಆಗಿ ಗೋಚರಿಸಿತು. ಆದರೆ, ಓಪನ್ ಎಐ ಇದನ್ನು ಬಿಡುಗಡೆ ಮಾಡಿಲ್ಲ.
ಚೀನಾ AI ನಲ್ಲಿ ಅಮೆರಿಕಕ್ಕಿಂತ ಮುಂದಿಲ್ಲವೇ?
ಡೀಪ್‌ಸೀಕ್‌ನ ತಂತ್ರಜ್ಞಾನವು ಚೀನಾ AI ನಲ್ಲಿ (ಕೃತಕ ಬುದ್ಧಿಮತ್ತೆ) ಅಮೆರಿಕಕ್ಕಿಂತ ಮುಂದಿಲ್ಲ. ಕಾರಣ ನಾವು ಓಪನ್ ಎಐನ 03 ಅನ್ನು ನೋಡಿಲ್ಲ. ಮತ್ತು ಅದರ ಕಾರ್ಯಕ್ಷಮತೆ ಮಾರುಕಟ್ಟೆಯಲ್ಲಿನ ಯಾವುದೇ ಮಾದರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿತ್ತು. ಚೀನಾ ಮುಕ್ತ ಮೂಲ ಎಐ ವ್ಯವಸ್ಥೆಗಳೊಂದಿಗೆ ಮುಂದುವರಿಯುತ್ತಿರುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಡೀಪ್‌ಸೀಕ್ ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯಂತ ಪವರ್ಫುಲ್ ಮಾದರಿ ರಚಿಸಿದೆ. ಈ ಮೂಲಕ ಜಗತ್ತನ್ನು ಅಚ್ಚರಿಗೊಳಿಸಿದೆ. ಅನೇಕ ಎಐ ತಜ್ಞರು ಪ್ರಕಾರ, ಬಹಳ ಕಡಿಮೆ ವೆಚ್ಚ ಹೊಂದಿದೆ. ಕಡಿಮೆ ಹಣಕ್ಕೂ ಎಐ ಮಾದರಿಗಳನ್ನು ರಚಿಸಬಹುದು ಎಂದು ಚೀನಾ ತೋರಿಸಿಕೊಟ್ಟಿದೆ.