ರೋಮ್: ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಪರೀಕ್ಷೆಗಾಗಿ ಪೋಪ್ ಫ್ರಾನ್ಸಿಸ್ ಅವರನ್ನು ರೋಮ್‌ನಲ್ಲಿರುವ ಪಾಲಿಕ್ಲಿನಿಕ್‌ಗೆ ಶುಕ್ರವಾರ ದಾಖಲಾದರು.
ಕಳೆದ ಗುರುವಾರದಿಂದಲೂ ಪೋಪ್ (88) ಅವರು ಸೋಂಕಿನಿಂದ ಬಳಲುತ್ತಿದ್ದಾರೆ. ಆದರೂ, ವ್ಯಾಟಿಕನ್‌ನಲ್ಲಿರುವ ಅವರ ನಿವಾಸ ಕಾಸಾ ಸಾಂತ ಮಾರ್ಟಾದಲ್ಲೇ ದೈನಂದಿನ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಭಾನುವಾರವೂ ಕೂಡ ಸಾರ್ವಜನಿಕರಿಗೆ ಕಾಣಿಸಿಕೊಂಡಿದ್ದರು.
ಪೋಪ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಊರುಗೋಲಿನ ನೆರವಿನಿಂದ ನಡೆದಾಡುತ್ತಿದ್ದು, ಎರಡು ಬಾರಿ ಮನೆಯಲ್ಲಿಯೇ ಬಿದ್ದು ಕೈ ಹಾಗೂ ಗಲ್ಲಕ್ಕೆ ಪೆಟ್ಟು ಮಾಡಿಕೊಂಡಿದ್ದರು.